ತಿಳಿದುಕೊಳ್ಳಲು ನೂರು ವಿಷಯ, ತಿಳಿಯಲಾರದೇ ಹೋದೆವು…
ಅರಿತುಕೊಳ್ಳಲು ನೂರು ಮನಸ್ಸು, ಅರಿಯಲಾರದೇ ಹೋದೆವು…
ಕಂಡ ಕೋಟಿ ಕನಸುಗಳನ್ನು ಇಲ್ಲೇ ಬಿಟ್ಟು ಹೊರಟೆವು…
ಸಾವಿರಾರು ಜನರ ಮಧ್ಯೆ ಒಂಟಿಯಾಗಿ ಉಳಿದೆವು…
ಆ ದೇವರ ಆಟದಲ್ಲಿ ನಾವು ಶೂನ್ಯವಾದೆವು…
ಹುಟ್ಟಿನಲ್ಲಿ ನಕ್ಕ ಜನರು ಸಾವಿನಲ್ಲಿ ಅತ್ತರು…
ಬದುಕಿನಲ್ಲಿ ಕೈಯ ಹಿಡಿದು ನಡೆದ ಜನರು ಸಾವಿನಲ್ಲಿ ಹೆಗಲ ಮೇಲೆ ಹೊತ್ತುಕೊಂಡು ನಡೆದರು…
ಬದುಕಿನಲ್ಲಿ ಕಂಡ ಕನಸು ನನಸಾಗದೇ ಉಳಿಯಿತು…
ಸಾವಿನಲ್ಲೂ ಸಾರ್ಥಕತೆಯೂ ದೊರೆಯದೇ ಹೋಯಿತು…
ಆ ದೇವರ ಆಟದಲ್ಲಿ ಎಲ್ಲ ಶೂನ್ಯವಾಯಿತು…
ಗೆಲ್ಲಬೇಕು ಎಂಬ ಛಲವು ಅರ್ದದಲ್ಲೇ ಉಳಿಯಿತು…
ಬದುಕಿನಲ್ಲಿ ಕಂಡ ಗುರಿಯು ಕನಸಾಗಿಯೇ ಉಳಿಯಿತು…
ಈ ಬದುಕ ಯಾತ್ರೆಯಲ್ಲಿ ಸಾವಿನ ಸಿಡಿಲು ಬಂದು ಬಡಿಯಿತು, ಬರ ಸಿಡಿಲು ಬಂದು ಬಡಿಯಿತು…
ಹುಟ್ಟು ಸಾವು ಅವನ ಆಯ್ಕೆ, ಈ ಬದುಕು ಅವನ ಇಚ್ಛೆ ಅವನ ಹೊರತು ಏನೂ ಇಲ್ಲ, ಆ ಭಗವಂತನ ಹೊರತು ಏನೂ ಇಲ್ಲ…
ಸಾವು-ನೋವಿಗೆ ಹೆದರಿ ಕುಳಿತರೆ ಇರುವ ಬದುಕು ಸಿಗುವುದಿಲ್ಲ…
ಸಾವು ಎಂಬುದು ಏಕಾಂಗಿ ಪಯಣ, ಯಾರು ಬರರು ನಮ್ಮ ಜೊತೆಗೆ…
ನಮ್ಮ ಸಾವು-ನೋವುಗಳನ್ನು ನಾವೇ ಸಹಿಸಿಕೊಳ್ಳಬೇಕು…
ನಮ್ಮ ಹೊರತು ಬರರು ಯಾರೂ ನಮ್ಮ ಸಾವು-ನೋವಿನಲ್ಲಿ…
ಈ ಬದುಕಿನ ಯಾತ್ರೆಯಲ್ಲಿ ಸೋಲು-ಗೆಲುವು ಶಾಶ್ವತವಲ್ಲ, ನಾವೇ ಇಲ್ಲಿ ಶಾಶ್ವತವಲ್ಲ…
ಕಷ್ಟ-ಸುಖದ ಬದುಕಿನಲ್ಲಿ ಸಾಗುವ ದಾರಿಗೆ ಕೊನೆಯೇ ಇಲ್ಲ…
ತಿಳಿದುಕೊಳ್ಳಲು ನೂರು ವಿಷಯ, ತಿಳಿಯಲಾರದೆ ಹೋದೆವು…
ಅರಿತುಕೊಳ್ಳಲು ನೂರು ಮನಸ್ಸು, ಅರಿಯಲಾರದೇ ಹೋದೆವು…
ಕಂಡ ಕೋಟಿ ಕನಸುಗಳನ್ನು ಇಲ್ಲೇ ಬಿಟ್ಟು ಹೊರಟೆವು…
ಆ ದೇವರ ಆಟದಲ್ಲಿ ನಾವು ಶೂನ್ಯವಾದೆವು…
ಸಾವಿರಾರು ಜನರ ಮದ್ಯೆ ಒಂಟಿಯಾಗಿ ಉಳಿದೆವು…
✍ಉಲ್ಲಾಸ್ ಕಜ್ಜೋಡಿ