ಪೆರುಮುಂಡ- ಕುಂಡಾಡು ಕೂಡು ರಸ್ತೆಯ ಗಿರೀಶ್ ಪೆರುಮುಂಡ ರವರ ಮನೆಯ ಬಳಿಯ ರಸ್ತೆಯ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ ಕಾರ್ಯ ಕ್ರಮ ಇತ್ತೀಚಿಗೆ ನಡೆಯಿತು.
ಒಂದು ವರ್ಷ ಗಳಿಂದ ನಾ ದುರಸ್ತಿ ಯಲ್ಲಿದ್ದ ಗಿರೀಶ್ ಪೆರುಮುಂಡ ರವರ ಮನೆಯ ಬಳಿಯ ಏರು ರಸ್ತೆ ಗೆ ತಾಲೂಕು ಪಂಚಾಯತ್ ಅನುದಾನದಲ್ಲಿ ಕಾಕ್ರೀಟೀಕರಣಕ್ಕೆ ಗುದ್ದಲಿ ಪೂಜೆಯನ್ನು ಪೆರಾಜೆ ಪ್ರಾಥಮಿಕ ಕ್ರಷಿಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಅಶೋಕ ಪೆರುಮುಂಡ ನೆರವೇರಿಸಿದರು.
ಬಿಜೆಪಿ ರೈತಮೋರ್ಚಾ ಕೊಡಗು ಜಿಲ್ಲಾಧ್ಯಕ್ಷ ನಾಗೇಶ ಕುಂದಲ್ಪಾಡಿ, ಗ್ರಾ.ಪಂ.ಸದಸ್ಯ ನಂಜಪ್ಪ ನಿಡ್ಯಮಲೆ, ಬಿಜೆಪಿ ಮುಖಂಡರಾದ ರಾಜಶೇಖರ ನಿಡ್ಯಮಲೆ, ಪ್ರಸನ್ನ ನೆಕ್ಕಿಲ, ಗಣೇಶ ನೆಡ್ಚಿಲ್, ರಸ್ತೆ ಫಲಾನುಭವಿಗಳಾದ ಪದ್ಮಯ್ಯ ಪೆರುಮುಂಡ, ಮುಕುಂದ ಪೆರುಮುಂಡ, ವಾಸುದೇವ ಪೆರುಮುಂಡ, ರುಕ್ಮಯ್ಯ ಪೆರುಮುಂಡ, ಸುಮಿತ್ರ ಪೆರುಮುಂಡ, ಶಿವ ಕುಮಾರ ಪೆರುಮುಂಡ ಇದ್ದರು. ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ತಮ್ಮ ಅವಧಿಯಲ್ಲಿ ತಾಲೂಕು ಪಂಚಾಯತ್ ನ ರೂ.3 ಲಕ್ಷ ಅನುದಾನ ಮಂಜೂರು ಗೊಳಿಸಿದ್ದು, ಅದರ ಕಾಮಗಾರಿ ಮುಂದಿನವಾರ ದಿಂದ ಪ್ರಾರಂಭಗೊಳ್ಳಲಿದೆ.
- Tuesday
- December 3rd, 2024