ನೆಲ್ಲೂರು ಕೆಮ್ರಾಜೆ : ನೆಲ್ಲೂರು ಕೆಮ್ರಾಜೆ ಭಾಗದ ಎರ್ಮೆಟ್ಟಿ, ಸುಳ್ಳಿ, ಕೆರೆಮೂಲೆಯಲ್ಲಿ ಆನೆ ದಾಳಿ ನಡೆಸಿದ್ದು ಈ ಭಾಗದ ತೋಟಗಳಲ್ಲಿ ಆನೆ ಹೆಜ್ಜೆ ಗುರುತು ಹಾಗೂ ಕೆಲ ತೋಟಗಳಲ್ಲಿ ಬಾಳೆ, ಅಡಿಕೆ ಗಿಡಗಳಿಗೆ ಹಾನಿ ಮಾಡಿದ ಘಟನೆ ನ.26 ರಂದು ವರದಿಯಾಗಿದೆ.
ನೆಲ್ಲೂರು ಕೆಮ್ರಾಜೆ ಭಾಗದಲ್ಲಿ ಆನೆ ಬಂದದ್ದು ಅಪರೂಪ. ಮಂಡೆಕೋಲು,ಮಡಪ್ಪಾಡಿ, ಸಂಪಾಜೆ,ಮರ್ಕಂಜ ಭಾಗದಲ್ಲಿ ಕೃಷಿಗೆ ಹಾನಿ ಮಾಡುತ್ತಿದ್ದ ಆನೆ ಇದೀಗ ನೆಲ್ಲೂರು ಕೆಮ್ರಾಜೆಗೆ ಕಾಲಿರಿಸಿದೆ. ಮರ್ಕಂಜದಿಂದ ಈ ಭಾಗಕ್ಕೆ ಬಂದಿರಬಹುದು ಎನ್ನಲಾಗಿದೆ.
- Wednesday
- December 4th, 2024