ನ.27 ರಂದು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆಯಲ್ಲಿ ಚಂದ್ರಶೇಖರ ಕನಕಮಜಲು ರವರ ಅಧ್ಯಕ್ಷತೆಯಲ್ಲಿ ನಡೆದ ಜೇಸಿಐ ಸುಳ್ಯ ಸಿಟಿಯ ಮಹಾಸಭೆಯಲ್ಲಿ 2022 ರ ಸಾಲಿನ ಅಧ್ಯಕ್ಷ ಸ್ಥಾನಕ್ಕೆ ಬಶೀರ್ ಯು.ಪಿ ಬೆಳ್ಳಾರೆ ಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಶ್ವತ್ ಅಡ್ಕಾರ್, ಸಾಯಿಶೃತಿ ಪಿಲಿಕಜೆ, ಮೋಹಿತ್ ಹರ್ಲಡ್ಕ, ರಂಜಿತ್ ಪಿ.ಜೆ, ಶೃತಿ ಪಿ.ಜೆ, ಕಾರ್ಯದರ್ಶಿಯಾಗಿ ಶಶಿಧರ್ ಎಕ್ಕಡ್ಕ, ಜೊತೆ ಕಾರ್ಯದರ್ಶಿಯಾಗಿ ಮೋಕ್ಷಿತ್ ಎಸ್, ಖಜಾಂಜಿಯಾಗಿ ಬಾಗೇಶ್ ಕೆ.ಟಿ ಮತ್ತು ನಿರ್ದೇಶಕರುಗಳಾಗಿ ಕೃತಿಕಾ ಗುರುರಾಜ್, ವೆಂಕಟೇಶ್, ಪ್ರಜ್ವಲ್, ಪುಷ್ಪರಾಜ್, ಗೋಪಾಲಕೃಷ್ಣ ಪೆರ್ಲಂಪಾಡಿ, ಧನುಷ್, ಜೇಸಿ ಸಪ್ತಾಹ ನಿರ್ದೇಶಕರಾಗಿ ಲೋಕೇಶ್ ಉರುಬೈಲು, ಜೆಜೇಸೀ ನಿರ್ದೇಶಕರಾಗಿ ಸಂಪ್ರೀತಾ ಮತ್ತು ಜೇಸೀರೆಟ್ ಅಧ್ಯಕ್ಷೆಯಾಗಿ ಸಾಧಿಕಾ ಬಶೀರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ವಿನಯ್ ರಾಜ್ ಮಡ್ತಿಲ ಸಹಕರಿಸಿದರು. ವೇದಿಕೆಯಲ್ಲಿ ಸ್ಥಾಪಕರಾದ ಮನಮೋಹನ್ ಬಳ್ಳಡ್ಕ ಮತ್ತು ತೀರ್ಥವರ್ಣ ಬಳ್ಳಡ್ಕ ಉಪಸ್ಥಿತರಿದ್ದರು. ಘಟಕಾಧ್ಯಕ್ಷ ಚಂದ್ರಶೇಖರ ಕನಕಮಜಲು ಸ್ವಾಗತಿಸಿ, ಅಶ್ವತ್ ಅಡ್ಕಾರ್ ವಂದಿಸಿದರು.