ಚುನಾವಣಾ ನಿರ್ಣಯಕ್ಕೆ ಬದ್ಧನಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ನಾನು ಯಾರ ಡಮ್ಮಿ ಅಭ್ಯರ್ಥಿ ಅಲ್ಲ, ನಾನೊಬ್ಬ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕನಾಗಿ ಆಯ್ಕೆಯಾದರೆ ಗೌಡ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧಿಸುವ ನಿರ್ದೇಶಕ ಸ್ಥಾನದ ಅಭ್ಯರ್ಥಿ ಹೇಮಾನಂದ ಹಲ್ದಡ್ಕ ಹೇಳಿದರು.
ಸುಳ್ಯದ ಸುದ್ದಿಗೋಷ್ಠಿಯಲ್ಲಿ ನ.27 ರಂದು ಮಾತನಾಡಿದ ಅವರು ಯಾರ ಆಮಿಷಕ್ಕೆ ಸ್ಪರ್ಧೆ ಮಾಡುತ್ತಿಲ್ಲ, ಸ್ಪರ್ಧಿಸುವ ಹಕ್ಕು ನನಗೆ ಇರುವುದರಿಂದ ಮತ್ತು ಉನ್ನತ ಸ್ಥಾನದಲ್ಲಿ ಇರುವವರೊಂದಿಗೆ ಚುನಾವಣೆಯ ಸ್ಪರ್ಧಿಯಾಗಿ ನಿಲ್ಲುವ ಸಂತೋಷವಿದೆ.
ಭಾಸ್ಕರ ದೇವಸ್ಯ ಚುನಾವಣೆಯಿಂದ ಹಿಂದೆ ಸರಿದ ಕಾರಣ ನಾನು ಹಿಂಪಡೆಯುವ ಅಗತ್ಯ ಇಲ್ಲ ಹಾಗಾಗಿ ಉಡುಪಿ ಗೌಡ ಒಕ್ಕಲಿಗರ ಸೇವಾ ಸಂಘದ ಸೂಚನೆಯ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ.
ನಾನು ವೈಯುಕ್ತಿಕ ನೆಲೆಯ ಕಣದಲ್ಲಿ ಮುಂದುವರಿಯುತ್ತೇನೆ. ಎಲ್ಲರೂ ವೈಯುಕ್ತಿಕ ನೆಲೆಯಲ್ಲೇ ಬೆಂಬಲಿಸುವರು ಎಂಬ ನಿರೀಕ್ಷೆ ಇದೆ. ಉಡುಪಿಯಲ್ಲಿ ಒಕ್ಕಲಿಗರ ಸಂಘದ ಸದಸ್ಯತ್ವ ಅಭಿಯಾನ ನಡೆಸಿ ಹಲವರಿಗೆ ಸದಸ್ಯತ್ವ ಮಾಡಿ ಕೊಟ್ಟಿದ್ದೇನೆ. ಮುಂದೆಯೂ ಗೌಡ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸಮುದಾಯದ ಜನರಿಗೆ ದೊರಕಿಸಿಕೊಡುವ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತೇನೆ ಎಂದರು.
- Thursday
- November 21st, 2024