ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಇದರ ಕಾರ್ಯಕ್ರಮದಡಿಯಲ್ಲಿ ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಘಟಕವು ರಾಜ್ಯದ 34 ತಾಲೂಕುಗಳಲ್ಲಿ ಕಾರ್ಯನಿರ್ವಾಹಹಿಸುತ್ತಿದೆ. ಇದರ ಸುಳ್ಯ ತಾಲೂಕು ಸಮಿತಿಯು ನವೆಂಬರ್ 25 ರ ಗುರುವಾರದಂದು ಸುಳ್ಯ ತಾಲ್ಲೂಕಿನ ಯೋಜನಾ ಕಚೇರಿ ಸುಳ್ಯದಲ್ಲಿ ರಚನೆಗೊಂಡಿದ್ದು, ಸುಳ್ಯ ಘಟಕದ ಜಯರಾಮ್.ಪಿ.ಜಿ. ಅವರು ತಾಲೂಕು ಕ್ಯಾಪ್ಟನ್ ಆಗಿ ಹಾಗೂ ಸಹ ಕ್ಯಾಪ್ಟನ್ ಆಗಿ ನಾಲ್ಕೂರು ಘಟಕದ ಸತೀಶ್ ಹಾಲೆಮಜಲು ಇವರು ಆಯ್ಕೆಗೊಂಡರು. ಇವರ ಸಮಿತಿಯು 130 ಸ್ವಯಂಸೇವಕರನ್ನು ಒಳಗೊಂಡಿದೆ.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಯಾಸ್ ಹಾಗೂ ಶೌರ್ಯ ಶ್ರೀ ತಂಡದ ಯೋಜನಾಧಿಕಾರಿ ಜೈವಂತ್ ಪಟಾಗರ್ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಚೆನ್ನಕೇಶವ ಹಾಗೂ ವಲಯಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.