Ad Widget

ನ.26-27 : ಎಲಿಮಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ ಹಾಗೂ ಅಂತರ ರಾಜ್ಯ ಸಾಂಸ್ಕ್ರತಿಕ ವಿನಿಮಯ ಕಾರ್ಯಕ್ರಮ

ಸರಕಾರಿ ಪ್ರೌಢ ಶಾಲೆ ಎಲಿಮಲೆ , ಶಾಲಾಭಿವೃದ್ದಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಸಿಸಿಆರ್ ಟಿ ಬಳಗ ಇದರ ಆಶ್ರಯದಲ್ಲಿ ದಿನಾಂಕ ನವಂಬರ್ 26, 2021 ಶುಕ್ರವಾರದಂದು ತಾಲೂಕು ಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ, ಪ್ರದರ್ಶನ, ಇನ್ಸೈರ್ ಅವಾರ್ಡ್ ನಾಮನಿರ್ದೇಶಿತ ವಿದ್ಯಾರ್ಥಿಗಳಿಗೆ ಹಾಗೂ ನೋಡಲ್ ಶಿಕ್ಷಕರಿಗೆ ವಿಜ್ಞಾನ ಮಾದರಿ ತಯಾರಿ ಬಗ್ಗೆ ತರಬೇತಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್ ಇವರು ವಹಿಸಲಿದ್ದಾರೆ. ಉದ್ಗಾಟಿನೆ ಯನ್ನು ಪದ್ಮ ಶ್ರೀ ಪ್ರಶಸ್ತಿ ಪುರಸ್ಕ್ರತರಾದ ಗಿರೀಶ ಭಾರದ್ವಾಜ ಇವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಲ್ಲೇಸ್ವಾಮಿ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಮೋಹನ ರಾಮ ಸುಳ್ಳಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ ಎನ್, ಜ್ಞಾನ ದೀಪ ವಿಶ್ವಸ್ಥ ಮಂಡಳಿ ಎಲಿಮಲೆ ಇದರ ಅಧ್ಯಕ್ಷರಾದ ಚಂದ್ರಶೇಖರ ಭಟ್, ಕನಾಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸುಳ್ಯ ಇದರ ಅಧ್ಯಕ್ಷರಾದ ಶ್ರೀಧರ ಗೌಡ ಇವರು ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಇದರ ಆಡಳಿತ ಮಂಡಳಿ ಸದಸ್ಯರಾದ ಜಾನ್ಸನ್ ತರಬೇತಿ ನಡೆಸಲಿದ್ದಾರೆ. ಬಹುಮಾನ ವಿತರಣೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಪಿ ಎನ್ ಭಟ್ ಬಾಳಿಲ ಇವರು ನಡೆಸಲಿದ್ದಾರೆ.
ನವಂಬರ್ 27ರಂದು ಸಿಸಿಆರ್ ಟಿ ಬಳಗ ಸುಳ್ಯ ಇವರ ಸಹಯೋಗದಲ್ಲಿ ಅಂತರ ರಾಜ್ಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಸಾಂಪ್ರದಾಯಿಕ ಹಬ್ಬ, ವರ್ಣಚಿತ್ರ ಸಂಭ್ರಮ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ ಜಿಲ್ಲಾಧಿಕಾರಿಗಳಾದ ಡಾ.ರಾಜೇಂದ್ರ ಇವರು ವಹಿಸಲಿದ್ದಾರೆ. ಕಾರ್ಯ ಕ್ರಮದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬಿರಲ್ ಎಜುಕೇಶನ್ ಅಧ್ಯಕ್ಷ
ಡಾ.ಕೆ ವಿ ಚಿದಾನಂದ ಇವರು ನೆರವೇರಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹದೇವ ಎಸ್.ಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ, ಲಯನ್ಸ್ ಅಧ್ಯಕ್ಷ
ಲ ಆನಂದ್ ಪೂಜಾರಿ, ಜ್ಞಾನದೀಪ ವಿದ್ಯಾ ಸಂಸ್ಥೆ
ಸ೦ಚಾಲಕರಾದ ತೀರ್ಥ ರಾಮ ಏವಿ , ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸುಳ್ಯದ ಅಧ್ಯಕ್ಷ ತೀರ್ಥ ರಾಮ ಎಚ್ ಬಿ ಹಾಗೂ ವಿಶೇಷ ಅತಿಥಿಗಳಾಗಿ ಲಿಂಗಾರೆಡ್ಡಿ . ತೆಲ೦ಗಾಣ, ಅಹಮ್ಮದ್
ಬಿಲಾಲ್ ಮಲ್ಲಿಕ್. ಕಾಶ್ಮಿರ , ಖ್ಯಾತ ಕಥಕ್ ನೃತ್ಯ ಪಟು ಜನಾರ್ಧನ ಸರ್ಕಾರ್, ಡಯೆಟ್ ಹಿರಿಯ ಉಪನ್ಯಾಸಕ
ಕೆಂಪಲಿಂಗಪ್ಪ ಇವರು ಭಾಗವಹಿಸಲಿದ್ದಾರೆ. ತದ ನಂತರ ಪಾರಂಪರಿಕ ಕೃಷಿ ಹಾಗೂ ಅಲಂಕಾರಿಕ ವಸ್ತುಗಳ ತಯಾರಿ ಸರಕಾರಿ ಪ್ರೌಢ ಶಾಲೆ ಎಣ್ಮೂರು ವಿದ್ಯಾರ್ಥಿಗಳ ವರ್ಣಚಿತ್ರ ಸಂಭ್ರಮ ಹಾಗೂ ವಿದ್ಯಾರ್ಥಿ ಗಳ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು ಅಧ್ಯಕ್ಷತೆಯನ್ನು ಕು ಅನಿತಾ ಲಕ್ಷ್ಮಿ ತಹಶೀಲ್ದಾರ್ ಸುಳ್ಯ ಇವರು ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಲ. ಎ೦ ಬಿ ಸದಾಶಿವ ಇವರು ನೆರವೇರಿಸಲಿದ್ದಾರೆ. ನಿತ್ಯಾನಂದ ಮುಂಡೋಡಿ ಇವರು ವಿಶೇಷ ಅತಿಥಿಗಳನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ವೀಣಾ ಎ೦ ಟಿ, ಮೋಹನ ಎಣ್ಮೂರು, ದಯಾನಂದ ಡಿ ಟಿ ಹಾಗೂ ಹರೀಶ್ ಮೆದು ಇವರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಪೇರಾಲ್ ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading