
ಮಾತೃಭೂಮಿ ಸೇವಾ ಟ್ರಸ್ಟ್(ರಿ.), ತುಮಕೂರು ಇವರು ಕೊಡಮಾಡುವ ರಾಷ್ಟ್ರಮಟ್ಟದ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಗೆ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದು ನ. 21ರಂದು ಮಾತೃಭೂಮಿ ಸೇವಾ ಟ್ರಸ್ಟ್(ರಿ.) ತುಮಕೂರು ಇದರ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಮಾನಿಕೆರೆ ಹತ್ತಿರ, ತುಮಕೂರು ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವೇದಿಕೆಯಲ್ಲಿ ರುವ ಅತಿಥಿಗಳ ಸನ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು.
ಸಮಾರಂಭದ ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ, ಕಾರ್ಯಕ್ರಮದ ಸಭಾಧ್ಯಕ್ಷರೂ ಆದ ಶ್ರೀಮತಿ. ಡಾ.ಜ್ಯೋತಿ ಶ್ರೀನಿವಾಸ್., ಡಾ.ಕೆಂಚನೂರು ಶಂಕರ್ ಖ್ಯಾತ ರಂಗಭೂಮಿ ಕಲಾವಿದ, ಸಾಹಿತಿ, ರಾಹುಲ್ ಕುಮಾರ್ ಶಹಪೂರವಾಡ್ ಭಾರತೀಯ ಪೋಲೀಸ್ ಸೇನಾ ಜಿಲ್ಲಾ ವರಿಷ್ಠಾಧಿಕಾರಿ, ರವಿಕುಮಾರ್ ಸೈನಿಕರು ಮೊದಲಾದ ಗಣ್ಯರು
ಉಪಸ್ಥಿತರಿದ್ದರು.
ಲತಾಶ್ರೀ ಸುಪ್ರೀತ್ ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಸುಳ್ಯ ಸುಪ್ರೀತ್ ಮೋಂಟಡ್ಕ ರವರ ಪತ್ನಿ.