
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು ಇದರ ವತಿಯಿಂದ ಸದಸ್ಯರ ಖಾತೆಗೆ ಪ್ರಗತಿ ನಿಧಿ ವರ್ಗಾವಣೆ ಕಾರ್ಯಕ್ರಮ ಅನುಷ್ಠಾನ ಮಾಡಲಿದ್ದು ತಾಲೂಕಿನಲ್ಲಿ ಪ್ರಥಮ ಬಾರಿಗೆ ಗುತ್ತಿಗಾರು ವಲಯದಲ್ಲಿ ಗುತ್ತಿಗಾರು ಹಣ ಸಂಗ್ರಹ ಕೇಂದ್ರದಲ್ಲಿ ನಡೆಯಲಿದ್ದು ಇದರ ಅಂಗವಾಗಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಗುತ್ತಿಗಾರು ವಲಯ ಕಚೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಹಾಗೂ ಕರಪತ್ರ ಬಿಡುಗಡೆಯನ್ನು ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟ್ ವಲಳ೦ಬೆಯರು ನೆರವೇರಿಸಿದರು. ಈ ಸಂದರ್ಭ ತಾಲ್ಲೂಕಿನ ಯೋಜನಾಧಿಕಾರಿಗಳಾದ ಚೆನ್ನಕೇಶವ ರವರು ಸದಸ್ಯರ ಖಾತೆಗೆ ಪ್ರಗತಿ ನಿಧಿ ವರ್ಗಾವಣೆ ಕಾರ್ಯಕ್ರಮದ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳಿಧರ, ಗುತ್ತಿಗಾರು ಒಕ್ಕೂಟದ ಅಧ್ಯಕ್ಷರಾದ ಅಚ್ಯುತ ಗುತ್ತಿಗಾರು , ವಳಲಂಬೆ ಒಕ್ಕೂಟದ ಅಧ್ಯಕ್ಷರಾದ ಕಲಾವತಿ ಮೊಟ್ಟೆಮನೆ ,ಸೇವಾ ಪ್ರತಿನಿಧಿಗಳಾದ ಲೋಕೇಶ್ವರ್ ,ವಳಲಂಬೆ ವಿಭಾಗದ ಸೇವಾ ಪ್ರತಿನಿಧಿ ಶ್ರೀಮತಿ ಲೋಕೇಶ್ವರಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.