
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ‘ಕಾಂಗ್ರೆಸ್ ಸದಸ್ಯತ್ವ’ ಅಭಿಯಾನಕ್ಕೆ ಚಾಲನೆ ಹಾಗೂ ದಿ. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ರವರ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಒಂದುವರೆ ವರ್ಷದ ರೈತರ ಹೋರಾಟಕ್ಕೆ ಬಿಜೆಪಿ ತಲೆಬಾಗಿದೆ. ರೈತರ ಹೋರಾಟದಿಂದ ಸರಕಾರವು ತಿದ್ದುಪಡಿಯನ್ನು ಹಿಂದಕ್ಕೆ ಪಡೆದಿದೆ. ರೈತ ಹೋರಾಟಕ್ಕೆ ಸಂದ ಜಯ. ಈ ಬಗ್ಗೆ ಹೋರಾಟ ನಡೆಸಿದ ರೈತರಿಗೆ ಬ್ಲಾಕ್ ಕಾಂಗ್ರೆಸ್ ಅಭಿನಂದನೆ ಸಲ್ಲಿಸುತ್ತದೆ ಎಂದರು. ದ ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎಂ ವೆಂಕಪ್ಪ ಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಮುಖ ನಾಯಕರುಗಳಾದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಪಿ ಎಸ್ ಗಂಗಾಧರ್, ಎಸ್ ಸಂಶುದ್ದಿನ್, ವಿಶ್ವನಾಥ ರೈ ಕಳಂಜ, ಶ್ರೀಮತಿ ರಾಜೀವಿ ರೈ,ಹಮೀದ್ ಕುತ್ತಮೊಟ್ಟೆ, ಅನಿಲ್ ರೈ ಚಾವಡಿಬಾಗಿಲು, ಚಂದ್ರಶೇಖರ ಕಾಮತ್, ಸದಾನಂದ ಮಾವಜಿ, ಭವಾನಿಶಂಕರ್ ಕಲ್ಮಡ್ಕ, ಸಿದ್ದಿಕ್ ಕೊಕ್ಕೋ, ಶಾಫಿ ಕುತ್ತಮೊಟ್ಟೆ, ಬಶೀರ್ ಬೆಳ್ಳಾರೆ, ಮುಸ್ತಫಾ ಕೆ ಎಂ, ನಂದರಾಜ್ ಸಂಕೇಶ, ಪರಮೇಶ್ವರ್ ಕೆಂಬಾರೆ, ಅನಿಲ್ ರೈ ಪುಡ್ಕಜೆ, ದಿನೇಶ್ ಅಂಬೆಕಲ್ಲು, ಶಶಿಧರ ಎಂ ಜೆ, ಅಬ್ದುಲ್ ಗಫೂರ್ ಕಲ್ಮಡ್ಕ, ಸಚಿನ್ ರಾಜ್ ಶೆಟ್ಟಿ, ಮಧುಸೂಧನ ಬೂಡು, ಸತ್ಯಕುಮಾರ್ ಆಡಿಂಜ, ಸುರೇಶ್ ಅಮೈ, ಧೀರ ಕ್ರಾಸ್ತಾ, ರಫೀಕ್ ಪಡು, ಗಂಗಾಧರ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.