Ad Widget

ಕುಕ್ಕೆ ಸುಬ್ರಹ್ಮಣ್ಯ : ಜಾತ್ರಾ ಪ್ರಯುಕ್ತ ರಥಗಳಿಗೆ ಗೂಟ ಪೂಜೆ ಕಾರ್ಯಕ್ರಮ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಟಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಎಳೆಯುವ ರಥಗಳಿಗೆ ಗೂಟ ಪೂಜಾ ಮಹೂರ್ತ ನ.19ರ ಶುಕ್ರವಾರದಂದು ನೆರವೇರಿತು. ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನವಾದ ಶುಕ್ರವಾರ ಗೂಟ ಪೂಜಾ ಮಹೂರ್ತವನ್ನು ವಿವಿಧ ವೈದಿಕ ವಿಧಾನಗಳೊಂದಿಗೆ ಕ್ಷೇತ್ರ ಪುರೋಹಿತ ವೇದಮೂರ್ತಿ ಮಧುಸೂದನ ಕಲ್ಲೂರಾಯ ನೆರವೇರಿಸಿದರು. ಬಳಿಕ ರಥಗಳ ಗೂಟಗಳಿಗೆ ಪೂಜೆ ಮಾಡಿದರು.
ಆರಂಭದಲ್ಲಿ ಬ್ರಹ್ಮರಥಕ್ಕೆ ಆಳವಡಿಸುವ ಗೂಟಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಪಂಚಮಿ ರಥದ ಗೂಟಗಳಿಗೆ ಪೂಜೆ ನಡೆಯಿತು. ನಂತರ ಪುರೋಹಿತರು ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲ ನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥ ಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯವನ್ನು ನೀಡಿದರು. ಅಲ್ಲದೇ ಇತರರಿಗೆ ಪ್ರಸಾದ ನೀಡಿದರು. ಬಳಿಕ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಬ್ರಹ್ಮರಥ ಮತ್ತು ಪಂಚಮಿ ರಥಕ್ಕೆ ಗೂಟ ನೆಡುವ ಕೈಂಕರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕಾರ್ಯನಿರ್ವಾಹಣಾಧಿಕಾರಿ ಡಾ| ನಿಂಗಯ್ಯ, ಎಇಓ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವನಜಾ.ವಿ ಭಟ್, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರ ಐತಪ್ಪ ಅರಿಗುಡಿ, ಸಹಗುರಿಕಾರ ದಿನಾಕರ ಕುಲ್ಕುಂದ ಕಾಲನಿ, ಹಿರಿಯರಾದ ಎ.ವಿ ನಾಗೇಶ್, ಮೋಂಟ ಮಲೆ, ಅಂಗಾರ ಮಲೆ, ಕೆಂಚಪ್ಪ ಕಲ್ಲಜಡ್ಕ, ಸುಂದರ ಕಲ್ಲಜಡ್ಕ, ಪ್ರಮುಖರಾದ ಭಾಸ್ಕರ ಆರ್ಗುಡಿ ಸೇರಿದಂತೆ ರಥಕಟ್ಟುವ ಮೂಲ ನಿವಾಸಿ ಮಲೆಕುಡಿಯ ಜನಾಂಗದ 50 ಯುವಕರು ಮತ್ತು ಭಕ್ತರು ಉಪಸ್ಥಿತರಿದ್ದರು.

. . . . . . . . .

ವರದಿ :- ಉಲ್ಲಾಸ್ ಕಜ್ಜೋಡಿ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading