
ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಮತ್ತು ರಥೋತ್ಸವದ ಸಮಾಲೋಚನಾ ಸಭೆ ದೇವಸ್ಥಾನದಲ್ಲಿ ಇಂದು ನಡೆಯಿತು. ಡಿ.30 ಮತ್ತು 31 ರಂದು ನಡೆಯಲಿರುವ ಜಾತ್ರೊತ್ಸವದ ಪೂರ್ವಭಾವಿ ತಯಾರಿಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾದ ಸದಾನಂದ ರೈ ಅರ್ಗುಡಿ, ಗೌರವಾಧ್ಯಕ್ಷರಾದ ಭಾಸ್ಕರ ಗೌಡ ಪಂಡಿ,ಧಾರ್ಮಿಕ ಉತ್ಸವ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ತುಳಸಿ ನಾಗೇಶ್ ಪಡ್ಕಿಲಾಯ,ಮತ್ತು ಎಲ್ಲಾ ಬೈಲುವಾರಿನ ಸಂಚಾಲಕರು,ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕರಾದ ಶ್ರೀವತ್ಸ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ರೈ ಅರ್ಗುಡಿ ಧನ್ಯವಾದಗೈದರು.
(ವರದಿ : ಗಗನ್ ಕಟ್ಟೆಮನೆ)