ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಯೂನಿಯನ್ ನಿ. ಮಂಗಳೂರು, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಹಾಗೂ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಸಂಪಾಜೆ, ಸುಳ್ಯ ತಾಲೂಕು ದ. ಕ. ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 68ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಸಾಂಕೇತಿಕವಾಗಿ ಇಂದು ಉದ್ಘಾಟಿಸಲಾಯಿತು.
ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿ, ಸಹಕಾರ ಕ್ಷೇತ್ರವು ಒಂದು ಪವಿತ್ರವಾದ ಕ್ಷೇತ್ರವಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದು ಆಗಿದೆ. ಸಮಾಜದ ಯುವಕರಿಗೆ ಮಹಿಳೆಯರಿಗೆ ಮತ್ತು ಅಬಲ ವರ್ಗದವರ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರವೂ ಮಹತ್ತರವಾಗಿದೆ. ಇದೊಂದು ನಿತ್ಯ ನಿರಂತರವಾದ ಆಂದೋಲನ ವಾಗಿದ್ದು ಸದಾ ಸಮಾಜದ ಕೃಷಿಕರ ಸಹಕಾರಿಗಳ ಏಳಿಗೆಗೆ ಸೇವಾ ಮನೋಭಾವದಲ್ಲಿ ಕಾರ್ಯಚಟುವಟಿಕೆ ಮಾಡುವ ಕ್ಷೇತ್ರವಾಗಿದ್ದು ಗ್ರಾಮದ ಎಲ್ಲಾ ವರ್ಗದ ಜನರು ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಹೇಳಿದರು.
ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಯವರು, ಇಂದು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಸಹಕಾರಿ ಸಪ್ತಾಹ ಅದ್ದೂರಿಯಾಗಿ ನಡೆಯಬೇಕಾಗಿತ್ತು. ಆದರೆ ಸರ್ಕಾರದ ಚುನಾವಣಾ ನೀತಿ ಸಂಹಿತೆಯಿಂದ ಕೇವಲ ಸಾಂಕೇತಿಕವಾಗಿ ಆಚರಿಸುವುದು ಅನಿವಾರ್ಯ. ಸದಾ ಸಂಘದ ಸದಸ್ಯರ ಕಷ್ಟಸುಖಗಳಲ್ಲಿ ಸಂಘವು ಭಾಗಿಯಾಗಿದ್ದು ಕೋವಿಡ್ 19 ರ ಸಂದರ್ಭದಲ್ಲಿ ಸಂಘದ ಗ್ರಾಮದ ಜನತೆಗೆ ನೀಡಿರುವ ವಿಶೇಷ ಪಡಿತರ ಪ್ಯಾಕೇಜ್, ಸದಸ್ಯರ ಸಾಲದ ಮೇಲಿನ ಬಡ್ಡಿ ಮನ್ನಾ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರೈತರ ಸ್ನೇಹಿ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಶತಮಾನೋತ್ಸವದ ಸಂಭ್ರಮಾಚರಣೆಗೆ ಮುಂದಿನ ಜನವರಿಯಲ್ಲಿ ಚಾಲನೆ ನೀಡಲಿದ್ದು ಹಲವಾರು ಯೋಜನೆಗಳನ್ನು ಆಡಳಿತ ಮಂಡಳಿಯು ಹಮ್ಮಿಕೊಂಡಿದೆ ಎಂದರು.
ದ ಕ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ನಿರ್ದೇಶಕಿ ಸಾವಿತ್ರಿ ರೈ, ಸಂಘದ ನಿರ್ದೇಶಕರಾದ ಗಣಪತಿ ಭಟ್ ಪಿ. ಯನ್., ಸುಮತಿ ಶಕ್ತಿವೇಲು, ಆನಂದ ಗೌಡ, ಜಗದೀಶ್ ರೈ ಕೆ ಆರ್, ಯಮುನಾ ಬಿ.ಎಸ್, ಪ್ರಕಾಶ್ ಕೆ ಪಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ಸ್ವಾಗತಿಸಿ, ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ರವರು ವಂದಿಸಿದರು.