ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನಡೆಯುತ್ತಿದ್ದು ಇಂದು ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ ನಡೆಯಿತು. ರಾತ್ರಿ ದೇವಸ್ಥಾನದಲ್ಲಿ ಶ್ರೀದೇವರ ಪೂಜೆ ನಡೆದು ಬಳಿಕ ಅಚಲಾಪುರ ಕಟ್ಟೆಯವರೆಗೆ ದೇವಸ್ಥಾನದ ವತಿಯಿಂದ ನಿರ್ಮಿಸಲಾದ ನೂತನ ಲಾಲ್ಕಿಯಲ್ಲಿ ಶ್ರೀ ದೇವರ ವೈಭವದ ಉತ್ಸವ ಮೆರವಣಿಗೆ ನಡೆಯಿತು. ಬಳಿಕ ಅಚಲಾಪುರ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿತು.
ಉತ್ಸವ ಮೆರವಣಿಗೆಯಲ್ಲಿ ಬಾಳಿಲ ಶ್ರೀ ಮಹಾವಿಷ್ಣು ಸಿಂಗಾರಿ ಮೇಳದಿಂದ ಚೆಂಡೆ ವಾದನ, ಬೆಳ್ಳಾರೆ ಎ.ಎಸ್ ಬ್ಯಾಂಡ್ ನ ಬ್ಯಾಂಡ್ ವಾದನ ಹಾಗೂ ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಮೊಕ್ತೇಸರರಾದ ಯಂ. ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ. ಸುರೇಶ್ ಶೆಣೈ, ಬಿ. ಕೃಷ್ಣ ಪೈ, ಬಿ. ಅಶೋಕ ಪೈ, ಬಿ.ಮಿಥುನ್ ಶೆಣೈ, ಬಿ. ಸುದರ್ಶನ ಮಲ್ಯ, ಬೆಳ್ಳಾರೆ ಗೌಡ ಸಾರಸ್ವತ ಬ್ರಾಹ್ಮಣ ಯುವಕ ವೃಂದದ ಅಧ್ಯಕ್ಷರಾದ ಯಂ. ರಾಜೇಶ್ ಶ್ಯಾನುಭಾಗ್ ಮತ್ತು ಸದಸ್ಯರು, ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.