
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದಿಂದ ಈ ವರ್ಷ ಸಮಾಜ ಸೇವಾ ಯೋಜನೆಯಡಿ ನೀಡುವ 1 ಲಕ್ಷ ರೂ. ಧನಸಹಾಯವನ್ನು ಕಲ್ಲುಮುಟ್ಲು ನಿವಾಸಿ ಜಯರಾಮನ್ ನಾಯರ್ ಅವರಿಗೆ ಮನೆ ಕಟ್ಟಲು ನೀಡುವುದೆಂದು ತೀರ್ಮಾನಿಸಲಾಗಿತ್ತು. ಅದರಂತೆ ನ.17 ರಂದು ಮಂಜೂರಾತಿ ಪತ್ರ ಮತ್ತು ಪ್ರಥಮ ಕಂತು ರೂ 50,000 ವನ್ನು ಅವರಿಗೆ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಪಿ ಸಿ ಜಯರಾಮರವರು ಹಸ್ತಾಂತರಿಸಿದರು. ಈ ಸಂದರ್ಭ ದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರನ್ ನಾಯರ್, ನಾಯರ್ ಸಮಾಜ ದ ಅಧ್ಯಕ್ಷ ಭಾಸ್ಕರನ್ ನಾಯರ್, ಸಮಾಜ ಸೇವಾ ವಿಭಾಗದ ಸಂಚಾಲಕರಾದ ಹರೀಶ್ ಬಂಟ್ವಾಳ್, ಸಂಶುದ್ದೀನ್ ಪಿ. ಎಸ್. ಗಂಗಾಧರ್, ಖಜಾಂಜಿ ದಿನೇಶ್ ಮಡ್ತಿಲ, ಕಾರ್ಯದರ್ಶಿ ಚಂದ್ರಾಕ್ಷಿ ಜೆ ರೈ ಉಪಸ್ಥಿತರಿದ್ದರು.