
ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಾಕ ಕಲಾವಿದರ ತಂಡವು
ಸಕಲೇಶಪುರದ ಮರೆನಹಳ್ಳಿಯ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಶ್ರೀ ಮರವ್ವ ಜಾತ್ರೆಯಲ್ಲಿ ಭಾಗವಹಿಸಿದ್ದು, ಚೆಂಡೆ ಪ್ರದರ್ಶನ ನೀಡಿದೆ. ಕಡಬ ತಾಲೂಕಿನ ಚಾರ್ವಾಕದ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳವು 2 ದಿನಗಳಿಂದ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ಮೇಳದ ವ್ಯವಸ್ಥಾಪಕ ಕಾರ್ಯದರ್ಶಿ ಶಿವಪ್ರಸಾದ್ ಜಿ., ಅಧ್ಯಕ್ಷರಾದ ಗೌತಮ್ ಕೆ ತಿಳಿಸಿದ್ದಾರೆ.