ಕಾಣಿಯೂರು: ತುಳುನಾಡು ಶ್ರೇಷ್ಠ ಸಂಸ್ಕೃತಿ,ಸಂಸ್ಕಾರ ಹೊಂದಿರುವ ಪುಣ್ಯ ಭೂಮಿ.ಮೂವಪ್ಪೆಯಂತಹ ತೀರಾ ಹಿಂದುಳಿದ ಹಳ್ಳಿಯಲ್ಲಿ ದೀಪಾವಳಿ ಹಬ್ಬವನ್ನು ಊರಿನವರೆಲ್ಲರೂ ಸೇರಿಕೊಂಡು ಆಚರಿಸುತ್ತಿರುವುದು ಒಳ್ಳೆಯ ವಿಚಾರ ಎಂದು ಸವಣೂರು ಹಿಂದೂ ಜಾಗರಣ ವೇದಿಕೆ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ಹೇಳಿದರು.ಅವರು ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಸ್ನೇಹಿತರ ಬಳಗ ಕಲ್ಪಡ,ಮೂವಪ್ಪೆ ಇದರ ಆಶ್ರಯದಲ್ಲಿ ಮೂವಪ್ಪೆ ಶಾಲಾ ಕ್ರೀಡಾಂಗಣದಲ್ಲಿ ನಡೆದ 5 ನೇ ವರ್ಷದ ದೀಪಾವಳಿ ಕ್ರೀಡಾಕೂಟ ಮತ್ತು ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನ್ಯಾಯ,ಧರ್ಮದಲ್ಲಿ ನಾವು ನಡೆದರೆ ಇಲ್ಲಿ ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ಯುವಕರು ಸಂಘಟಿತರಾಗಿ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಊರಿನ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.ಇನ್ನೋರ್ವ ಅತಿಥಿ ಬೆಳ್ಳಾರೆ ಠಾಣಾಧಿಕಾರಿ ಆಂಜನೇಯ ರೆಡ್ಡಿ ಮಾತನಾಡಿ ಒಳ್ಳೆಯ ಶಿಕ್ಷಣ ಪಡೆದ ಯುವಕರು ಸರ್ಕಾರಿ ಕೆಲಸ ಪಡೆಯಲು ಪ್ರಯತ್ನ ಪಡಬೇಕು.ಈ ಬಗ್ಗೆ ಬಡವರ್ಗದ ವಿದ್ಯಾರ್ಥಿಗಳಿಗೆ ನೆರವಿನ ಅವಶ್ಯಕತೆಯಿದ್ದರೆ ತನ್ನಿಂದಾದ ಸಹಾಯ ಮಾಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲ್ವಿಚಾರಕ ವಸಂತ, ಕಲ್ಪಡ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರರಾದ ಶಿವರಾಮ ಉಪಾಧ್ಯಾಯ, ಕೊಡಿಯಾಲ ಗ್ರಾ.ಪಂ.ಉಪಾಧ್ಯಕ್ಷ ಹರ್ಷನ್ ಕೆ.ಟಿ., ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ ಉಪಸ್ಥಿತರಿದ್ದರು. ಸ್ನೇಹಿತರ ಬಳಗದ ಅಧ್ಯಕ್ಷ ಗಣೇಶ್ ಅಂಗಾರಡ್ಕ ಅಧ್ಯಕ್ಷತೆ ವಹಿಸಿದ್ದರು. ನವೀನ್ ಕೊಡೆಂಕಿರಿ ಸ್ವಾಗತಿಸಿ,ಜಗದೀಶ್ ಅಂಗಾರಡ್ಕ ವಂದಿಸಿದರು.ಹರೀಶ್ ಕಲ್ಲಪಣೆ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಊರಿನ ನಿವೃತ್ತ ಸೈನಿಕ ಕೊರಗಪ್ಪ ಪೂರ್ಲಾಡಿ,ಕಲ್ಪಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮಧುಶ್ರೀ,ಯಶೋಧ ಹಾಗೂ ದೀಕ್ಷಿತ್ ಇವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಉದ್ಘಾಟನೆ: ಬೆಳಿಗ್ಗೆ ಕಾರ್ಯಕ್ರಮವನ್ನು ಊರಿನ ಹಿರಿಯರಾದ ಮಾಯಿಲಪ್ಪ ಗೌಡ ಕಲ್ಪಡ ಉದ್ಘಾಟಿಸಿದರು.ಕೊಡಿಯಾಲ ಗ್ರಾ.ಪಂ.ಅಧ್ಯಕ್ಷ ಪ್ರದೀಪ್ ರೈ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸೇವಾಪ್ರತಿನಿಧಿ ವನಿತಾ,ಶಾಲಾ ಮುಖ್ಯಗುರು ನಿರ್ಮಲ ಕೆ.ಎಸ್,ಎಸ್ ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಗೌಡ ಕಣಿಲೆಗುಂಡಿ,ಕಲ್ಪಡ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಕೇಶವ ಕಲ್ಪಡತೋಟ,ಜಲೀಲ್ ಮೂವಪ್ಪೆ ಭಾಗವಹಿಸಿದ್ದರು.ಪ್ರಸಾದ್ ಕಲ್ಪಡ ಸ್ವಾಗತಿಸಿ ಲೋಕೇಶ್ ಕೆ.ವಿ ವಂದಿಸಿದರು.ಬಳಿಕ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಕೊಡುಗೆ: ಸ್ನೇಹಿತರ ಬಳಗದ ವತಿಯಿಂದ ಸ.ಕಿ.ಪ್ರಾ.ಶಾಲೆ ಮೂವಪ್ಪೆ ಇಲ್ಲಿಗೆ ಕೊಡುಗೆಯಾಗಿ ನಿರ್ಮಿಸಿದ ಶಾಲಾ ಮುಖ್ಯದ್ವಾರವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
- Thursday
- November 21st, 2024