ಹರಿಹರ ಪಲ್ಲತಡ್ಕ ಹಿ.ಪ್ರಾ.ಶಾಲೆಯ ಶಿಕ್ಷಕರು ಪಾಠ ಪ್ರವಚನ ಸರಿಯಾಗಿ ಮಾಡುತ್ತಿಲ್ಲ, ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ, ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಆರೋಪಿಸಿ ಮಕ್ಕಳು ಶಾಲೆಗೆ ಬರದೆ ಮನೆಯಲ್ಲೇ ಕೂತ ಘಟನೆ ವರದಿಯಾಗಿದೆ.
ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಇತರೇ ೨ ಶಿಕ್ಷಕರು ಶಾಲೆಗೆ ಸರಿಯಾಗಿ ಬರುತ್ತಿಲ್ಲ, ಬಂದರೂ ತರಗತಿ ನಡೆಸುತ್ತಿಲ್ಲ, ಶಾಲೆಯಲ್ಲಿದ್ದರೂ ತರಗತಿಗೆ ಹಾಜರಾಗುವುದಿಲ್ಲ, ಮಕ್ಕಳಲ್ಲಿ ಬೇಧಭಾವ ಮಾಡುತ್ತಾರೆ, ತಮ್ಮ ಕರ್ತವ್ಯ ಮಾಡದೆ ಮಕ್ಕಳಿಗೆ ಅನ್ಯಾಯ ಮಾಡುತ್ತಿರುವುದಾಗಿ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದರಿಂದ ಏಳನೇ ತರಗತಿವರೆಗೆ ಇರುವ ಈ ಶಾಲೆಗೆ ಕೇವಲ ಮೂರು ಶಿಕ್ಷಕರನ್ನು ನೀಡಿದ್ದಾರೆ. ಇಲ್ಲೇ ಕರ್ತವ್ಯ ನಿರ್ವಹಿಸಬೇಕಾದ ಒಬ್ಬರನ್ನು ಕರಂಗಲ್ಲು ಶಾಲೆಗೆ ಕಳುಹಿಸಿದ್ದಾರೆ. ಗೌರವ ಶಿಕ್ಷಕರನ್ನೂ ಕೊಡುತ್ತಿಲ್ಲ. ಎಲ್ಲಾ ಬೆಳವಣಿಗೆ ಶಿಕ್ಷಣಾಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಎಸ್ ಡಿ ಎಂ ಸಿ ಅಧ್ಯಕ್ಷ ನೇಮಿಚಂದ್ರ ದೋಣಿಪಳ್ಳ, ಸೌಮ್ಯ ಕಿರಿಭಾಗ, ಪದ್ಮನಾಭ ಕಲ್ಕುದಿ, ನವೀನ್ ಮುಂಡಾಜೆ, ದೇವಿಪ್ರಸಾದ್, ಶ್ರೀದೇವಿ ಬಿ ಕೆ, ಸಾವಿತ್ರಿ ಕೆ, ಭಾರತಿ, ತನುಜ, ಸವಿತಾ, ಹಿಮ್ಮತ್ ಕೆ ಸಿ, ಲೊಕೇಶ್, ತೇಜಕುಮಾರ, ಶಾಂತಪ್ಪ, ಪ್ರಭಾಕರ, ಸೋಮಶೇಖರ, ನಾರಾಯಣ,ಸತೀಶ್, ಮತ್ತಿತರರು ಉಪಸ್ಥಿತರಿದ್ದರು