ಹಿಂದೂ ಜಾಗರಣ ವೇದಿಕೆ ಮಹಾವಿಷ್ಟು ಘಟಕ ಕಣ್ಕಲ್ ಕೇನ್ಯ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುಬ್ರಹ್ಮಣ್ಯ ಗೌಡ ಕಣ್ಕಲ್ ರವರ ಮನೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಪದ್ಮನಾಭ ಕೆರೆಕೋಡಿ, ಉಪಾಧ್ಯಕ್ಷರಾಗಿ ಮಾಧವ ಕೆ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಐನಡ್ಕ, ಕಾರ್ಯದರ್ಶಿಯಾಗಿ ಸದಾನಂದ ಕೆರೆಕೋಡಿ, ಪ್ರಚಾರ ಪ್ರಮುಖ್ ಆಗಿ ಲೋಕೇಶ್ ಕೆರೆಕೋಡಿ, ಸಂಪರ್ಕ ಪ್ರಮುಖ್ ಆಗಿ ದೇವಿಪ್ರಸಾದ್ ಆನೆಮನೆ, ಯುವವಾಹಿನಿ ಹೃತ್ವಿಕ್ ಕಣ್ಕಲ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ವಾಸುದೇವ ಕೆರೆಕೋಡಿ, ಸ್ಥಾಪಕಾಧ್ಯಕ್ಷ ರಾಜೀವ ಗೌಡ ಕಣ್ಕಲ್ ಹಾಗೂ ಗೌರವ ಸಲಹೆಗಾರರಾದ ರಘುನಾಥ ರೈ ಕೆರೆಕೊಡಿ, ಸುಬ್ರಹ್ಮಣ್ಯ ಕಣ್ಕಲ್ ಮತ್ತು ಸರ್ವಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.