

ಅಮರಪಡ್ನೂರು ಗ್ರಾಮದ ಕಲ್ಲುಮಲೆ ಪರಿಶಿಷ್ಟ ಜಾತಿ ಮನೆಗಳಿಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕೆಂಬ ಮನವಿಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಚೂಂತಾರು ಮತ್ತು ದಲಿತ ಮುಖಂಡೆ ಸರಸ್ವತಿ ಬೊಳಿಯಮಜಲು ರವರ ನೇತೃತ್ವದಲ್ಲಿ ಅಕ್ಟೋಬರ್ 16ರಂದು ಜಿಲ್ಲಾಧಿಕಾರಿಗಳ ಅಮರಮೂಡ್ನೂರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಫಲಾನುಭವಿಗಳು ಮನವಿ ಸಲ್ಲಿಸಿದ್ದರು. ಸದರಿ ರಸ್ತೆಯು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಆಚಾರ್ಯ ರವರ ಖಾಸಗಿ ಜಮೀನಿನಲ್ಲಿ ಹಾದು ಹೋಗುವ ಕಾರಣ ವಿಚಾರಿಸಿದಾಗ ರಸ್ತೆ ನಿರ್ಮಾಣ ಸಂದರ್ಭ ನಷ್ಟ ಪರಿಹಾರ ನೀಡಬೇಕು ಮತ್ತು ಇದರಲ್ಲಿ ರಾಜಕೀಯವಿದೆ ಎಂದು ಜಿಲ್ಲಾಧಿಕಾರಿಗಳಲ್ಲಿ ನಾರಾಯಣ ಆಚಾರ್ಯ ರವರು ದೂರಿಕೊಂಡರು. ತಕ್ಷಣ ಸಚಿವರು ಮತ್ತು ಜಿಲ್ಲಾಧಿಕಾರಿಗಳು ತಹಶೀಲ್ದಾರ್ ರವರಿಗೆ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸ್ವತಂತ್ರವಾಗಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿ ನ್ಯಾಯಯುತ ತೀರ್ಮಾನ ಘೋಷಿಸುತ್ತೇವೆ ಇತ್ತಂಡಗಳು ಒಪ್ಪಿಕೊಂಡು ಮುಂದುವರಿಯಬೇಕು ಎಂದು ತಿಳಿಸಿದ್ದರು. ಅದರಂತೆ ಸ್ಥಳ ಪರಿಶೀಲನೆಗೆ ತಹಶೀಲ್ದಾರ್ ರವರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ರಸ್ತೆ ನಿರ್ಮಾಣದ ಸ್ಥಳಕ್ಕೆ ಪರಿಶೀಲನೆಗೆ ತೆರಳಿದಾಗ ಮಾಲಿಕರಾದ ನಾರಾಯಣ ಆಚಾರ್ಯರವರು 8ಅಡಿ ಅಗಲದ ರಸ್ತೆ ನಿರ್ಮಾಣಕ್ಕೆ ಒಪ್ಪಿಕೊಂಡು ಲಿಖಿತವಾಗಿ ನೀಡಿದರು. ಅದರಂತೆ ಮೊನ್ನೆ ಗುರುವಾರ ಗ್ರಾಮ ಕರಣಿಕರು ಗುರುತು ಮಾಡಿದಂತೆ ದಲಿತ ಮುಖಂಡೆ ಸರಸ್ವತಿ ಬೊಳಿಯಮಜಲು ರವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯ ವತಿಯಿಂದ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಹಿಟಾಚಿ ತೆಗೆದುಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾದಾಗ ನಾರಾಯಣ ಆಚಾರ್ಯ ರವರು ತನ್ನ ಓಮ್ನಿ ಕಾರನ್ನು ಅಡ್ಡಲಾಗಿ ನಿಲ್ಲಿಸಿ ತಡೆ ಒಡ್ಡಿದರು. ಈ ವಿಚಾರ ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ಹೋಗಿ ಉಪ ಆರಕ್ಷಕರು ಆಗಮಿಸಿ ಮಾತುಕತೆ ನಡೆಸಿದಾಗ ನಾರಾಯಣ ಆಚಾರ್ಯರು ಅವರ ಕೋಳಿ ಫಾರಂ ನಲ್ಲಿ ಬೆಳೆದು ನಿಂತ ಕೋಳಿಗಳಿದ್ದು ರಸ್ತೆ ನಿರ್ಮಾಣ ಸಂದರ್ಭ ನೀರಿನ ಟ್ಯಾಂಕ್ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಕೋಳಿಗಳಿಗೆ ನೀರಿನ ಅಭಾವದಿಂದ ತೋಂದರೆಯಾಗುತ್ತದೆ ಮತ್ತು ಕಲ್ಲಿನ ಘಟನೆ ತೆಗೆದು ರಸ್ತೆ ನಿರ್ಮಾಣಕ್ಕೆ ಆಕ್ಷೇಪವಿಲ್ಲ ಎಂದು ತಿಳಿಸಿದ್ದು ಅದರಂತೆ ನಿನ್ನೆ ನಾರಾಯಣ ಆಚಾರ್ಯರ ಕೋಳಿ ಹೋಗಿದ್ದು ಕಲ್ಲು ಘಟನೆ ತೆರವುಗೊಳಿಸಿದ್ದರು. ಇಂದು ಸರಸ್ವತಿ ಬೊಳಿಯಮಜಲು ರವರ ನೇತೃತ್ವದಲ್ಲಿ ರಸ್ತೆಗೆ ಗುದ್ದಲಿ ಪೂಜೆ ನಡೆಸಿ ರಸ್ತೆ ನಿರ್ಮಾಣದ ಕಾರ್ಯ ಪ್ರಾರಂಭವಾಯಿತು.

ಅಂತೂ ಸುಮಾರು 20 ವರ್ಷಗಳಿಂದ ರಸ್ತೆಗಾಗಿ ಕಾಯುತ್ತಿದ್ದ ಫಲಾನುಭವಿಗಳು ಸಂತಸಪಟ್ಟರು.