
ಗುತ್ತಿಗಾರು: ಇಲ್ಲಿನ ನಾಲ್ಕೂರು ಗ್ರಾಮದ ಸಮಾನ ಮನಸ್ಕರ ಯುವಕರ ತಂಡ ‘ಹೊಂಬೆಳಕು’ ನ.14ರಂದು ಅಸ್ವಿತ್ವಕ್ಕೆ ಬಂದಿತು. ‘ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ’ ಎಂಬ ಧ್ಯೇಯೋದ್ಧೇಶದೊಂದಿಗೆ ಪ್ರಾರಂಭವಾದ ತಂಡವನ್ನು ಕೃಷಿಕರಾದ ಎಂ.ಕೆ.ಮೋಹನ್ ಕುಮಾರ್‌ರವರು ತಂಡದ ಸದಸ್ಯರಿಗೆ ಸಮವಸ್ತ್ರ ನೀಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ತಂಡವು ಗ್ರಾಮದ ಬಸ್ಸು ತಂಗುದಾಣ, ಶಾಲೆ ಹಾಗೂ ಇನ್ನಿತರ ಸರ್ಕಾರಿ ಸ್ವಾಮ್ಯದ ಕಟ್ಟಡಗಳ ಸುತ್ತಮುತ್ತ ತಿಂಗಳಲ್ಲಿ ಒಂದು ದಿನ ಒಂದು ಗಂಟೆ ಸ್ವಚ್ಛತೆ ಮಾಡುವುದಾಗಿ ತೀರ್ಮಾನಿಸಲಾಗಿದೆ. ಅದರಂತೆ ಪ್ರಥಮವಾಗಿ ಗ್ರಾಮದ ಮೆಟ್ಟಿನಡ್ಕ ಕ್ರಾಸ್ ಬಸ್ಸು ತಂಗುದಾಣವನ್ನು ಸ್ವಚ್ಛಗೊಳಿಸಲಾಯಿತು. ತಂಡದ ಸದಸ್ಯ ಡಿ.ಆರ್.ಉದಯಕುಮಾರ್ ಸ್ವಾಗತಿಸಿ, ದಿನೇಶ್ ಹಾಲೆಮಜಲು ಎಂ.ಕೆ.ಮೋಹನ್‌ಕುಮಾರ್‌ರನ್ನು ಗೌರವಿಸಿದರು. ತಂಡದ ಸಂಚಾಲಕ ಚರಣ್.ಡಿ.ಕೆ ಧನ್ಯವಾದಗೈದರು. ತಂಡದ ಸದಸ್ಯರು ಸುಮಾರು 15 ಮಂದಿ ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು.