
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ದಂತ ವೈದ್ಯ ಡಾ.ಮುರಲೀ ಮೋಹನ ಚೂಂತಾರು ಅವರನ್ನು ಫೆಲೋಶಿಪ್ ಗೆ ಆಯ್ಕೆ ಮಾಡಿದೆ.ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನದ ಜತೆಗೆ, ವಿಜ್ಞಾನಿಗಳು, ತಂತ್ರಜ್ಞರು ಮತ್ತು ವಿಜ್ಞಾನ ಸಂವಹನಕಾರರನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ.ವಿಜ್ಞಾನ,ತಂತ್ರಜ್ಞಾನ, ಕೃಷಿ,ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅ.29ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಫೆಲೋಶಿಪ್ ಗೆ ಆಯ್ಕೆ ಮಾಡಲಾಗಿದೆ.
ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಫೆಲೋಶಿಪ್ ಸದಸ್ಯತ್ವ ಅಧಿಕೃತವಾಗಿ ನೀಡಲಾಗುವುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಡಾ.ಚೂಂತಾರು ಅವರಿಗೆ ಕಳುಹಿಸಿದ ಆಯ್ಕೆ ಪತ್ರದಲ್ಲಿ ತಿಳಿಸಿದೆ