
ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಇಲ್ಲಿ ಮಕ್ಕಳ ದಿನಾಚರಣೆಯನ್ನು ನ.14ರಂದು ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಯಾದ ಹರಿಪ್ರಸಾದ್ ಆಳ್ವರವರು ಮಕ್ಕಳಿಗೆ ಪ್ರೀತಿಯ ಕೊಡುಗೆಯಾಗಿ ಸುಮಾರು ರೂ. 45,000 ಮೌಲ್ಯದ ಬೆಂಚು, ಡೆಸ್ಕುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಹರಿಪ್ರಸಾದ್ ಆಳ್ವರವರ ತಾಯಿ ಶ್ರೀಮತಿ ವಾರಿಜ, ಸಹೋದರಿ ಶ್ರೀಮತಿ ಸುಪ್ರಿಯಾ ಆಳ್ವ, ಸುಳ್ಯ ತಾಲೂಕು ಮಹಿಳಾ ವಿವಿದ್ಧೋದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈ ಬೆಳ್ಳಾರೆ, ಬೆಳ್ಳಾರೆ ಗ್ರಾ.ಪಂ. ಸದಸ್ಯ ಅನಿಲ್ ರೈ ಪುಡ್ಕಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಲ್ಲವಿ ಉಪಸ್ಥಿತರಿದ್ದರು.