
ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ.14 ಆದಿತ್ಯವಾರದಂದು ಆರಂಭಗೊಂಡಿದ್ದು, ಬೆಳಗ್ಗೆ ಶ್ರೀ ದೇವರಿಗೆ ಪ್ರಾರ್ಥನೆ, ಬಳಿಕ ಪಂಡಿತ್ ದೇವರಾಯ ಕಿಣಿ ಮತ್ತು ಬಳಗದವರಿಂದ ಸಂತವಾಣಿ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಮೊಕ್ತೇಸರರಾದ ಯಂ. ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ. ಸುರೇಶ್ ಶೆಣೈ, ಬಿ. ಕೃಷ್ಣ ಪೈ, ಬಿ. ಅಶೋಕ ಪೈ, ಬಿ.ಮಿಥುನ್ ಶೆಣೈ, ಬಿ. ಸುದರ್ಶನ ಮಲ್ಯ, ಬೆಳ್ಳಾರೆ ಗೌಡ ಸಾರಸ್ವತ ಬ್ರಾಹ್ಮಣ ಯುವಕ ವೃಂದದ ಅಧ್ಯಕ್ಷರಾದ ಯಂ. ರಾಜೇಶ್ ಶ್ಯಾನುಭಾಗ್ ಮತ್ತು ಸದಸ್ಯರು, ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
ನ.20ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉತ್ಸವ ನಡೆಯಲಿದ್ದು, ನ.15 ಸೋಮವಾರದಂದು ಬೆಳಗ್ಗೆ 10.00 ಗಂಟೆಗೆ ದೀಪೋಜ್ವಲನ, ಏಕಾಹ ಭಜನೆ, ರಾತ್ರಿ 10.00 ಗಂಟೆಯಿಂದ ಮಹಾಪೂಜೆ ನಡೆಯಲಿದೆ. ನ.19ರಂದು ಕಾರ್ತಿಕ ಪೌರ್ಣಮಿ, ಲಕ್ಷದೀಪ ಉತ್ಸವ, ರಾತ್ರಿ ನಂತರ ಲಾಲ್ಕಿಯಲ್ಲಿ ಉತ್ಸವ ಜರುಗಲಿದೆ. ಪ್ರತಿದಿನ ಮಧ್ಯಾಹ್ನ 12.00 ಗಂಟೆಗೆ ದೇವಸ್ಥಾನದ ಉಭಯ ದೇವರಿಗೆ ಪೂಜೆ, ಭೂರಿಭೋಜನ ನಡೆಯಲಿದೆ.