ಸುಳ್ಯ: ಈ ಪ್ರಸಕ್ತ ಸಾಲಿನ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ 453 ಕೋಟಿ ವ್ಯವಹಾರ ನಡೆಸಿ 1.09 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 15 ಡಿವಿಡೆಂಡ್ ನೀಡಲಾಗುವುದು. ಶೀಘ್ರದಲ್ಲೇ ಸುಬ್ರಹ್ಮಣ್ಯ ಮತ್ತು ಮಡಂತ್ಯಾರುನಲ್ಲಿ ಶಾಖೆ ಆರಂಭಿಸಲಾಗುವುದು ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ ಅವರು ಹೇಳಿದರು.
ಅವರು ಗೌಡ ಸಮುದಾಯ ಭವನದಲ್ಲಿ ವಾರ್ಷಿಕ ಮಹಾಸಭೆಯ ಬಳಿಕ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಬೆಳ್ಳಿ ಹಬ್ಬದ ಸಂಭ್ರಮದ ವೇಳೆಗೆ 25 ಶಾಖೆಗಳನ್ನು ಹೊಂದುವ ಗುರಿ ಹೊಂದಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 125 ಕೋಟಿ ಠೇವಣಿ ಸಂಗ್ರಹಿಸಿ 100 ಕೋಟಿ ಸಾಲ ವಿತರಿಸಿ 500 ಕೋಟಿ ವ್ಯವಹಾರ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ,
ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರಾಕೋಲ್ಟಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್., ಹೇಮಚಂದ್ರ ಐ.ಕೆ., ನವೀನ್ ಕುಮಾರ್ ಜಾಕೆ, ಶ್ರೀಮತಿ ಜಯಲಲಿತ ಕೆ.ಎಸ್., ಶ್ರೀಮತಿ ನಳಿಸಿ ಸೂರಯ್ಯ, ಶ್ರೀಮತಿ ಲತಾ ಎಸ್. ಮಾವಾಜಿ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ. ವಿಶ್ವನಾಥ, ಉಪಸ್ಥಿತರಿದ್ದರು.
- Thursday
- November 21st, 2024