“ನಿಮ್ ತರ ಬದುಕೋಕೆ ಪ್ರಯತ್ನ…
ನೀವೇ ನಮ್ ಬದುಕಿನ ರಾಜರತ್ನ…..
ಮನುಷ್ಯನಿಂದ ದೇವರಾಗಿ ನಿಮ್ಮ ಹುಟ್ಟು ಇದು ಸಾವಲ್ಲ……
ಜೊತೆಗಿರದ ಜೀವ ಎಂದೆಂದಿಗೂ ಜೀವಂತ……”
ಎಳೆಯ ವಯಸ್ಸಿನಲ್ಲಿ ಅಕಾಲಿಕ ಮರಣ ದವಡೆಗೆ ಸಿಲುಕಿ ಭಗವಂತನ ಪಾದ ಸೇರಿದ ಕರುನಾಡಿನ ಕಣ್ಮಣಿ ಪುನೀತ್ ರಾಜ್ ಕುಮಾರ್ ರಿಗೆ ಮಡಪ್ಪಾಡಿಯ ಯುವಕ ಮಂಡಲ ಸಭಾಭವನದಲ್ಲಿ ಅಶ್ರುತರ್ಪಣ ಕಾರ್ಯಕ್ರಮ ನೆರವೇರಿಸಲಾಯಿತು. ಸುಳ್ಯ ಎಪಿಎಂಸಿ ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು ಹಣತೆ ಹಚ್ಚಿ, ಪುಷ್ಪಾರ್ಚನೆಗೈದು ಅಶ್ರುತರ್ಪಣಗೈದರು. ವೇದಿಕೆಯಲ್ಲಿ ಯುವಕ ಮಂಡಲ ಅಧ್ಯಕ್ಷ ಧನ್ಯಕುಮಾರ್ ದೇರುಮಜಲು, ಲೋಕಪ್ಪ ಶೀರಡ್ಕ, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುಮಂತ್ ಶೀರಡ್ಕ, ಸಚಿನ್ ಬಳ್ಳಡ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಎಲ್ಲರೂ ಹಣತೆ ಹಚ್ಚಿ ಪುಷ್ಪಾರ್ಚನೆಗೈದು ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಆಚರಿಸಲಾಯಿತು.