
ಸುಬ್ರಹ್ಮಣ್ಯದ ಕೆಯಸ್‍ಯಸ್ ಕಾಲೇಜಿನ ರಂಗಘಟಕ ಕುಸುಮ ಸಾರಂಗದ ವತಿಯಿಂದ ಕಾಲೇಜಿನಲ್ಲಿ ರಂಗ ಬೆಳಕು ಎಂಬ ಹೆಸರಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಗೋವಿಂದ ಎನ್.ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್ ಸ್ಕಂದ, ರಂಗ ನಿರ್ದೇಶಕ ಪ್ರವೀಣ್ ಎಡಮಂಗಲ, ಉಪನ್ಯಾಸಕ ವಿನ್ಯಾಸ್ ಹೊಸೊಳಿಕೆ, ಕುಸುಮ ಸಾರಂಗದ ಹಿರಿಯ ಸದಸ್ಯೆ ಶೋಭಾ, ವಕೀಲ ಅನಿಲ್ ಕರ್ಕೆರ, ಕಲಾವಿದ ಸುಧೀರ್ ಏನೆಕಲ್ಲು ಹಾಗೂ ಧನಂಜಯ ಕೊಡೆಂಕಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಕುಸುಮ ಸಾರಂಗದ ಪ್ರಸ್ತುತ ವಿದ್ಯಾರ್ಥಿಗಳು ರಂಗಗೀತೆಯನ್ನು ಹಾಡುವುದರ ಜೊತೆಗೆ ಹಣತೆಗಳನ್ನು ಬೆಳಗಿದರು. ನೂರಕ್ಕೂ ಅಧಿಕ ಹಣತೆಗಳನ್ನು ವೇದಿಕೆಯಲ್ಲಿ ಬೆಳಗಲಾಗಿತ್ತು. ಚಿತ್ರ ಕಲಾವಿದ ಮಿನಲ್ ಕುಸುಮ ಸಾರಂಗದ ಲಾಂಛನವನ್ನು ಚಿತ್ರಿಸಿ, ಅದರ ಮೇಲೆ ಹಣತೆಗಳನ್ನು ಬೆಳಗಲಾಗಿತ್ತು. ಸಭಾ ಕಾರ್ಯಕ್ರಮದ ನಂತರ ಸಿಹಿ ವಿತರಿಸಲಾಗಿತ್ತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಿಮಿಕ್ರಿ ಕಲಾವಿದ, ಚಿತ್ರನಟ ದೀಕ್ಷಿತ್ ಗೌಡ ಕುಂತೂರು ಇವರು ಕನ್ನಡ ಚಲನಚಿತ್ರ ನಟರ ಧ್ವನಿಯ ಅನುಕರಣೆ ಮಾಡಿದರು. ಆನಂತರ ಕುಸುಮ ಸಾರಂಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಅನಾವರಣ ನಡೆಯಿತು. ಈ ವೇಳೆ ರಂಗ ಬೆಳಕು ಕಾರ್ಯಕ್ರಮದ ಸಂಯೋಜಕ ರಾಮಚಂದ್ರ ಸುಬ್ರಹ್ಮಣ್ಯ, ಕುಸುಮ ಸಾರಂಗದ ಹಿರಿಯ ವಿದ್ಯಾರ್ಥಿಗಳಾದ ಅನಂತಕೃಷ್ಣ ಭಟ್, ಶಿವಕುಮಾರ್ ಕೈಕಂಬ, ಹರ್ಷಿತ್ ಪಡ್ರೆ ಮತ್ತು ಕುಸುಮ ಸಾರಂಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.