ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಸಂಯೋಜಿತ ರಬ್ಬರ್ ಟ್ಯಾಪರ್ಸ ಕೃಷಿ ಮಜ್ದೂರು ಸಂಘ ಸುಳ್ಯ ಇದರ ಕಾರ್ಯಕಾರಿ ಸಮಿತಿ ರಚನಾ ಸಭೆಯು ನ. 07ರಂದು ಸುಳ್ಯ ಕಲ್ಕುಡ ದೈವಸ್ಥಾನ ವಠಾರದಲ್ಲಿ ನಡೆಯಿತು. ಸುಳ್ಯ ತಾಲೂಕಿನ ರಬ್ಬರ್ ಟ್ಯಾಪರ್ಸ ಕೃಷಿ ಮಜ್ದೂರು ಸಂಘದ ಕಾರ್ಯಕಾರಿ ಸಮಿತಿ ರಚನಾ ಸಭೆಯು ಶಶಿಕುಮಾರ್ ಅಡ್ಯಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ಸ ಕೃಷಿ ಮಜ್ದೂರು ಸಂಘದ ಅಧ್ಯಕ್ಷರಾದ ಸುರೇಶ್ ದಯಾನಂದರು ಖಾಸಗಿ ರಬ್ಬರ್ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕಷ್ಟ ನಷ್ಟಗಳನ್ನು ಈಗಾಗಲೇ ಕಾರ್ಮಿಕ ಸಚಿವರಿಗೆ ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ,ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಇವರ ಗಮನಕ್ಕೆ ನಮ್ಮ ಮಾತೃ ಸಂಘವಾದ ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಇವರ ಮೂಲಕ ಮನವಿಯನ್ನು ಸಲ್ಲಿಸಿದ್ದೇವೆ. ಮಾನ್ಯ ಶಾಸಕಾದ ಹರೀಶ್ ಪೂಂಜರು ಈ ಬಗ್ಗೆ ಕಾರ್ಮಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಯಲ್ಲಿ ಮಾತುಕತೆ ಮಾಡುವ ಎಂದು ಭರವಸೆ ನೀಡಿರುತ್ತಾರೆ ಹಾಗೆಯೇ ಸಳ್ಯ ತಾಲೂಕಿನ ಸಮಸ್ತ ಖಾಸಗಿ ರಬ್ಬರ್ ಟ್ಯಾಪರ್ಸಗಳು ಒಗ್ಗೂಡಬೇಕೆಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬೆಳ್ತಂಗಡಿ, ಪುತ್ತೂರು ತಾಲೂಕಿನ ರಬ್ಬರ್ ಟ್ಯಾಪರ್ಸ ಕೃಷಿ ಮಜ್ದೂರು ಸಂಘದ ಅಧ್ಯಕ್ಷರಾದ ಯೋಗಿಶ್ ಪೂಂಜಾಲಕಟ್ಟೆ ಮತ್ತು ಅಚ್ಚುತ ಪ್ರಭು,ಜಿಲ್ಲಾ ಸಮಿತಿಯ ಸದಸ್ಯರಾದ ಶಶಿಕುಮಾರ್, ಸೆಲ್ವರಾಜ್ ಐವರ್ನಾಡು ಮಾತಾಡಿದರು.
ಸಮಾಜ ಸೇವಕ ಹಾಗು ಅರಂತೋಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಂಕರಲಿಂಗಂ ಮಾತನಾಡಿ ಕಾರ್ಮಿಕರು ಗ್ರೂಪ್ ಜೀವ ವಿಮೆ ಮಾಡಬೇಕು, ನೂತನವಾಗಿ ಆಯ್ಕೆ ಆದ ಪದಾಧಿಕಾರಿಗಳು ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದರು.
ನಂತರ ನಡೆದ ಸುಳ್ಯ ತಾಲೂಕಿನ ರಬ್ಬರ್ ಟ್ಯಾಪರ್ಸ ಕೃಷಿ ಮಜ್ದೂರು ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ಅಡ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸೆಲ್ವರಾಜ್ ಐವರ್ನಾಡು, ಸಂಚಾಲಕರಾಗಿ ಸತ್ಯಶಾಂತಿ ಕುಕ್ಕಂದೂರು, ಖಜಾಂಜಿಯಾಗಿ ಕೃಷ್ಣಕುಮಾರ್,ಉಪಾಧ್ಯಕ್ಷರಾಗಿ ಸತ್ಯನಾಥ ಇವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ್,ಖಜಾಂಜಿ ರಾಜ ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೆಲ್ವರಾಜ್ ಸ್ವಾಗತಿಸಿ, ಭುವನೇಶ್ವರ ಕಾರಿಂಜ ವಂದಿಸಿದರು.