ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 82 ನೇ ವಾರ್ಷಿಕ ಮಹಾಸಭೆಯು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ನ.07 ರಂದು ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಗತ ವರ್ಷದ ವರದಿಯನ್ನು ಮಂಡಿಸಿದರು. ಸಂಘದ ಅಧ್ಯಕ್ಷರ ಅಧ್ಯಕ್ಷತೆಯೊಂದಿಗೆ 82ನೇ ಸಭೆಯು ನಡೆಯಿತು, ಸಭೆಯಲ್ಲಿ ವರದಿ ವರ್ಷದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ನಂತರ ಗತ ವರ್ಷದ ಲೆಕ್ಕಪರಿಶೋಧನೆ ವರದಿಗಳು, 2020-21ನೇ ಸಾಲಿನಲ್ಲಿ ಬಜೆಟ್ ಗಿಂತ ಹೆಚ್ಚಿಗೆ ಖರ್ಚಾದ ಮೊಬಲಗು ಮಂಜೂರು, 2020-21ನೇ ಸಾಲಿನಲ್ಲಿ ಮಾರಾಟದಲ್ಲಿ ಕಂಡುಬಂದ ತೇಮಾನುಗಳ ಮಂಜೂರಾತಿ, 2021-22 ಸಾಲಿಗೆ ತಯಾರಿಸಿದ ಆಯ-ವ್ಯಯ ಪಟ್ಟಿಯ ಮಂಜೂರು ಈ ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರುಗಳ ಸರ್ವಾನುಮತದ ಒಪ್ಪಿಗೆ ಪಡೆಯಲಾಯಿತು.
ಈ ಗತ ವರ್ಷದಲ್ಲಿ ಸಂಘದ ಸದಸ್ಯರುಗಳಿಗೆ 8% ಲಾಭಾಂಶ ಹಂಚಿಕೆ ಮಾಡಲಾಯಿತು. ತದನಂತರ 20201-21 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ವಿಭಾಗದಿಂದ ಹನಿ ಗೋಳ್ಯಾಡಿ, ಪ್ರತೀಕ್ಷಾ.ಟಿ.ಕೆ, ಕನ್ನಿಕಾ ಅಂಬೆಕಲ್ಲು, ದಿವ್ಯಾ.ಕೆ.ಎಚ್, ನೇಹಾ.ಸಿ.ಟಿ, ಭವಿಷ್ಯ.ಬಿ.ಯು, ಸುಮನ್,ಕುತ್ಯಾಳ, ಗ್ರೀಷ್ಮಾ ಡಿ.ಕೆ, ಕಿರಣ್ ರಾಜ್ ಅಂಬೆಕಲ್ಲು, ಪೂರ್ವಿಕ್.ಕೆ.ಜಿ, ಚಿನ್ಮಯಿ.ಎ.ಪಿ, ಬಿಪಿನ್.ಯಂ.ಪಿ ಇವರಿಗೆ ಹಾಗೂ ಪಿಯುಸಿ ವಿಭಾಗದಿಂದ ನಿಶ್ಮಿತಾ ಕಾಯಾರ, ಸಾತ್ವಿಕ ಪಾಲ್ತಾಡು, ಚಂದನ.ಕೆ, ದೀಪ್ತಿ.ಎಂ.ಎನ್, ಹರ್ಷಿಣಿ.ಕೆ, ರಕ್ಷಾ.ಡಿ.ಕೆ ಇವರಿಗೆ ವಿತರಿಸಲಾಯಿತು.
ನಂತರ ಕೊವಿಡ್-19 ರ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಆಶಾ ಕಾರ್ಯಕರ್ತೆಯರಾದ ವೀಣಾ ಚಿರೆಕಲ್ಲು, ಉಮಾವತಿ ಬಲ್ಕಜೆ, ಅಂಗನವಾಡಿ ಕಾರ್ಯಕರ್ತೆಯರಾದ ವಿಮಲಾ.ಕೆ.ಎಸ್, ತಾರಾ ಕೇವಳ, ಆರೋಗ್ಯ ಕಾರ್ಯಕರ್ತೆಯರಾದ ಜಲಜಾಕ್ಷಿ ಇವರಿಗೆ ಹಾಗೂ 2020-21 ನೇ ಸಾಲಿನಲ್ಲಿ ಕ್ಯಾಂಪ್ಕೋದಲ್ಲಿ ಹೆಚ್ಚು ಅಡಿಕೆ ವಿಕ್ರಯಿಸಿದ ದೊಡ್ಡ ಕೃಷಿಕರ ಸಾಲಿನಲ್ಲಿ ಮಿತ್ರದೇವ ಮಡಪ್ಪಾಡಿ, ನಿತ್ಯಾನಂದ ಮುಂಡೋಡಿ, ಯತೀಂದ್ರ ಪಾಲ್ತಾಡು ಮತ್ತು ಸಣ್ಣ ರೈತರ ಸಾಲಿನಲ್ಲಿ ಹಮೀದ್, ಹೊನ್ನಪ್ಪ.ಎನ್.ಟಿ, ಪಿ.ಸಿ.ಜಯರಾಮ ಇವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಸಂಘದ ನಿರ್ದೇಶಕರಾದ ಸೋಮಶೇಖರ ಕೇವಳ ನಡೆಸಿಕೊಟ್ಟರು. ಈ ಸಭೆಯಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳು, ಸಂಘದ ಸದಸ್ಯರುಗಳು, ಬ್ಯಾಂಕ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ ಸ್ವಾಗತಿಸಿ, ಸಂಘದ ಉಪಾಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ವಂದಿಸಿದರು.