ಸರ್ಕಾರದ ಆದೇಶದಂತೆ ಸೂಕ್ತ ಮುಂಜಾಗೃತ ಕ್ರಮಗಳನ್ನು ಪಾಲಿಸಿಕೊಂಡು ಅಂಗನವಾಡಿಗಳನ್ನು ತೆರೆಯಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಇಂದು ಕಳಂಜ ಗ್ರಾಮದ ಅಯ್ಯನಕಟ್ಟೆ ಅಂಗನವಾಡಿಯಲ್ಲಿ ಮಕ್ಕಳ ಪ್ರಾರಂಭೋತ್ಸವವನ್ನು ನಡೆಸಲಾಯಿತು. ಪುಟಾಣಿಗಳಿಗೆ ಹೂವು ನೀಡುವುದರ ಮೂಲಕ ಅಂಗನವಾಡಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಕು. ದೀಪ್ತಿ ಎನ್, ಸಹಾಯಕಿ ಶ್ರೀಮತಿ ಲಲಿತಾ ಮಣಿಮಜಲು, ಎ.ಎನ್.ಎಂ ಬೇಬಿ ಕೆ ಸಿ, ಆಶಾ ಕಾರ್ಯಕರ್ತೆ ಶ್ರೀಮತಿ ಶೇಷಮ್ಮ, ಅಯ್ಯನಕಟ್ಟೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಸತೀಶ್ಚಂದ್ರ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಕು. ದೀಪ್ತಿ ಎನ್ ಇವರು ಸ್ವಾಗತಿಸಿ, ವಂದಿಸಿದರು.
- Thursday
- November 21st, 2024