
ಜೇಸಿಐ ಕುಂದಾಪುರ ಸಿಟಿಯ ಆತಿಥ್ಯದಲ್ಲಿ ನಡೆದ ಉನ್ನತಿ ವ್ಯವಹಾರ ಸಮ್ಮೇಳನದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಪಂಜದಲ್ಲಿ ಸೂರ್ಯ ಕನ್ಸಲ್ಟೆನ್ಸಿ ಮತ್ತು ಕನ್ಸ್ಟ್ರಕ್ಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕ್ಲಪ್ತ ಸಮಯದಲ್ಲಿ ನಗುಮೊಗದ ಪ್ರಾಮಾಣಿಕ ಸೇವೆ ನೀಡುತ್ತ ಸರಳ ಸಜ್ಜನಿಕೆಯಿಂದ ತಮ್ಮ ಪರಿಸರದ ಹಲವಾರು ಗ್ರಾಹಕರ ಮನೆ ಮತ್ತು ಮನೆಗಳಲ್ಲಿ ಸಂತಸದ ಹೊನಲಾಗಿರುವ ಜೇಸಿಐ ಪಂಜ ಪಂಚಶ್ರೀ ಉಪಾಧ್ಯಕ್ಷ ರಾದ ಜೇಸಿ ಎಚ್.ಸಿ.ಎಫ್ ಪ್ರವೀಣ್ ಕಾಯರ ಅವರಿಗೆ ‘ಸಾಧನಾಶ್ರೀ’ ಪ್ರಶಸ್ತಿಯನ್ನು ವಲಯಾಧ್ಯಕ್ಷರಾದ ಜೇಸೀ ಪಿಪಿಪಿ ಸೌಜನ್ಯ ಹೆಗ್ಡೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಲಯದ ವ್ಯವಹಾರ ವಿಭಾಗದ ಚೆಯರ್ಮನ್ ಜೇಸಿ ಸಮದ್ ಖಾನ್, ಘಟಕಾಧ್ಯಕ್ಷ ಜೇಸಿ ಗಣೇಶ್ ಭೀಮಗುಳಿ, ಪೂರ್ವಾಧ್ಯಕ್ಷರಾದ ಜೆ.ಎಫ್.ಪಿ ಚೇತನ್ ತಂಟೆಪ್ಪಾಡಿ, ಜೇಸಿ ಎಚ್.ಜಿ.ಎಫ್ ವಾಸುದೇವ ಮೇಲ್ಪಾಡಿ, ನಿಕಟಪೂರ್ವಾಧ್ಯಕ್ಷ ಜೇಸಿ ಎಚ್.ಜಿ.ಎಫ್ ನಾಗಮಣಿ ಕೆದಿಲ, ನಿರ್ದೇಶಕ ಜೇಸಿ ಕೌಶಿಕ್ ಕುಳ ಉಪಸ್ಥಿತರಿದ್ದರು.