
ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನ.07 ಆದಿತ್ಯವಾರ ಕುಂದಾಪುರದಲ್ಲಿ ಜರುಗಿದ ಜೇಸಿಐ ವಲಯ15 ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಸುಳ್ಯ ಗಾಂಧಿನಗರದ ಅಂಬಿಕಾ ಪ್ರಿಂಟಿಂಗ್ ಪ್ರೆಸ್ ಮಾಲಕರಾದ ಜೇಸಿ ಪಿ ಎಸ್ ಗಂಗಾಧರರವರಿಗೆ ತನ್ನ ವ್ಯವಹಾರ ವಿಭಾಗದ ಸಾಧನೆಗಾಗಿ ಜೇಸಿಐ ವಲಯಾಧ್ಯಕ್ಷರಾದ ಜೇಸಿಐ ಪಿಡಿಪಿ ಸೌಜನ್ಯ ಹೆಗ್ಡೆ ‘ಸಾಧನಾಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿಐ ಪಿಪಿಪಿ ಮುರಳಿ ಶ್ಯಾಂ, ವಲಯ 15 ರ ಪೂರ್ವಾಧ್ಯಕ್ಷರುಗಳಾದ ಜೇಸಿಐ ಪಿಪಿಪಿ ಅಶೋಕ್ ಚೂಂತಾರು, ಜೇಸಿ ಕೃಷ್ಣ ಮೋಹನ್ ಪಿ ಎಸ್ , ಜೇಸಿ ಕಿರಣ್ ಹೆಗ್ಡೆ, ಜೇಸಿ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಜೇಸಿ ಶರತ್ ಕುಮಾರ್, ವಲಯ ನಿರ್ದೇಶಕ ಜೇಸಿ ಲೋಕೇಶ್ ರೈ, ಜೇಸಿ ಸಮ್ಮದ್ ಖಾನ್, ಸುಳ್ಯ ಪಯಸ್ವಿನಿ ಘಟಕಾದ್ಯಕ್ಷ ಜೇಸಿ ಗುರುರಾಜ್ ಅಜ್ಜಾವರ, ವಲಯಾಧಿಕಾರಿ ಜೇಸಿ ದೇವರಾಜ್ ಕುದ್ಪಾಜೆ, ಜೇಸಿ ಅನಿಲ್ ಬಳ್ಳಡ್ಕ, ಜೇಸಿ ಸುರೇಶ್ ಕಾಮತ್, ಸುಧನ್ವ ಪಿ ಜಿ, ಜೇಸಿ ಪ್ರಿನ್ಸ್ ಪಿಂಟೋ, ಜೇಸಿ ನವೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.