
ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯಲ್ಲಿ ನ.06 ರಂದು ಬೆಳಿಗ್ಗೆ ಮರ ಬಿದ್ದು 2 ಕರೆಂಟ್ ಕಂಬ ತುಂಡಾಗಿದ್ದು, ಇದರ ದುರಸ್ತಿ ವೇಳೆ ಏರ್ ಫೈಬರ್ ಕೇಬಲ್ ಅನ್ನು ತುಂಡು ಮಾಡಿದ್ದಾರೆ ಎಂಬ ಆರೋಪ ಊರವರಿಂದ ಕೇಳಿ ಬರುತ್ತಿದ್ದು, ಇದರಿಂದ ಕರಂಗಲ್ಲು, ಮಳ್ಳುಬಾಗಿಲು, ಕಜ್ಜೋಡಿ ಸೇರಿದಂತೆ ಹಲವು ಭಾಗಗಳ ಸುಮಾರು 60 ಫೋನ್ ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಊರವರು ದೂರಿದ್ದಾರೆ. ಪೋನ್ ಸರಿ ಇಲ್ಲದೇ ಕರಂಗಲ್ಲುವಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದನ್ನು ಯಾರಿಗೂ ಫೋನ್ ಮಾಡಿ ತಿಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಗಮನ ಹರಿಸಬೇಕು ಎಂದು ಊರವರು ಒತ್ತಾಯಿಸಿದ್ದಾರೆ.
ವರದಿ :- ಉಲ್ಲಾಸ್ ಕಜ್ಜೋಡಿ