ಅಮರಪಡ್ನೂರು ಗ್ರಾಮದ ಸ. ಹಿ.ಪ್ರಾಥಮಿಕ ಶಾಲೆ ಶೇಣಿಯಲ್ಲಿ ನಿರಂತರ ಹಲವು ವರ್ಷಗಳಿಂದ ವಾಸ್ತವ್ಯ ಹೊಂದುತ್ತಿದ್ದ ಕೇಶವ ಭಟ್ ರವರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಚಟುವಟಿಕೆಗಳಿಗೆ ತೊಂದರೆ ಯಾಗುತಿದ್ದು, ಸದರಿ ಕೇಶವ ಭಟ್ ಎಂಬುವವರನ್ನು ಸ್ಥಳಾಂತರಿಸಲು ಶೇಣಿ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ ಮಾಡಬಾಕಿಲು ರವರು ಗ್ರಾಮ ಪಂಚಾಯತ್ ಗೆ ಮತ್ತು ಸ್ಥಳೀಯ ಸದಸ್ಯರಾದ ಅಶೋಕ್ ಚೂಂತಾರುರವರಲ್ಲಿ ಮನವಿ ಸಲ್ಲಿಸಿದ್ದರು.
ಈ ವಿಚಾರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ ಉಡುಪಿ ಜಿಲ್ಲೆ ಕಟಪಾಡಿಯ ಕಾರುಣ್ಯ ಅಭಯಾಶ್ರಮದ ಸಂಚಾಲಕರಾದ ಶ್ರೀ ಕುಮಾರ್ ರವರನ್ನು ಜೇಸಿ ರಾಘವೇಂದ್ರ ಪ್ರಭು ಕರ್ವಾಲು ರವರ ಮುಖಾಂತರ ಅಶೋಕ್ ಚೂಂತಾರುರವರು ಸಂಪರ್ಕಿಸಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸಿದ್ಧಿವಿನಾಯಕ ಭಟ್ ಚೂಂತಾರು ಮತ್ತು ಸತ್ಯವೆಂಕಟೇಶ್ ಹೆಬ್ಬಾರ್ ರವರ ಸಹಕಾರದೊಂದಿಗೆ ಕೇಶವ ಭಟ್ ರವರನ್ನು ಕಾರುಣ್ಯ ಆಶ್ರಮಕ್ಕೆ ಸೇರಿಸಲಾಯಿತು. ಈ ಸಂದರ್ಭದಲ್ಲಿ ಕಾರುಣ್ಯ ಅಭಯಾಶ್ರಮ ಕಟಪಾಡಿಯ ಸಂಚಾಲಕರಾದ ಶ್ರೀ ಕುಮಾರ್, ಜೇಸಿಐ ವಲಯ 15 ರ ಪೂರ್ವ ವಲಯ ಉಪಾಧ್ಯಕ್ಷ ಜೇಸಿ ರಾಘವೇಂದ್ರ ಪ್ರಭು ಕರ್ವಾಲು ಮತ್ತಿತರರು ಉಪಸ್ಥಿತರಿದ್ದರು.