ಪಂಜದ ಮುಖ್ಯರಸ್ತೆಯ ನಾಯರ್ ಕೆರೆ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಹತ್ತಿರ ಕಿಸಾನ್ ಅಗ್ರಿ ಸೊಲ್ಯೂಷನ್ ನ.5 ರಂದು ಶುಭಾರಂಭಗೊಂಡಿತು.
ಪಂಜ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇರಾಜೆ, ಪ್ರಗತಿಪರ ಕೃಷಿಕರಾದ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ಆನಂದ ಗೌಡ ಕಂಬಳ, ಪಂಜ, ಪಂಜ ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ , ವರ್ತಕರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಜಾಕೆ,ಎಸ್ ಆರ್ ಕೆ ಲ್ಯಾಡರ್ ಸಂಸ್ಥೆಯ ಮಾಲಕ ಕೇಶವ ಎ. ಉಪಸ್ಥಿತರಿದ್ದರು. ಇಲ್ಲಿ ಎಲ್ಲಾ ತರದ ಕೃಷಿ ಯಂತ್ರೋಪಕರಣದ ಮಾರಾಟ ಮತ್ತು ಸೇವೆ ಅತ್ಯುತಮ ಗುಣಮಟ್ಟ ಹಾಗು ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಪಾಲುದಾರರಾದ ರತೀಶ್ ಕೆ.ಮತ್ತು ಪ್ರವೀಣ್ ಕೆ.ಆರ್ ತಿಳಿಸಿದ್ದಾರೆ.