
ದಾವಣಗೆರೆಯಲ್ಲಿ ಅ. 31 ಮತ್ತು ನ.1 ರಂದು ನಡೆದ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಜಶ್ವಿತಾ ದಂಬೆಕೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಗುತ್ತಿಗಾರು ಗ್ರಾಮದ ದಂಬೆಕೋಡಿ ರಾಘವ ಮತ್ತು ಯಶೋಧ ದಂಪತಿಗಳ ಪುತ್ರಿ. ಉಜಿರೆ ಯಸ್. ಡಿ. ಯಂ. ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಸಂಸ್ಥೆಯ ತರಬೇತುದಾರರಾದ ಸಂತೋಷ್ ಕುಮಾರ್ ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.