ಬೆಳ್ಳಾರೆಯ ಮುಖ್ಯರಸ್ತೆ ಬಳಿಯ ಶ್ರೀ ದುರ್ಗಾ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸುಪ್ರಭ ಜ್ಯುವೆಲ್ಲರಿ ವರ್ಕ್ಸ್ ಸಂಸ್ಥೆಯು 12ನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು ಈ ಪ್ರಯುಕ್ತ ಸಂಸ್ಥೆಯಲ್ಲಿ ನ.4ರಂದು ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕರಾದ ಸತ್ಯನಾರಾಯಣ ಆಚಾರ್ಯ ಬೆಳ್ಳಾರೆ ಹಾಗೂ ಪ್ರಸಾದ್ ಆಚಾರ್ಯ ಬೆಳ್ಳಾರೆ ಮತ್ತು ಸಂಸ್ಥೆಯ ಸಿಬ್ಬಂದಿ ಪುರುಷೋತ್ತಮ ಮುಂಡುಗಾರು ಉಪಸ್ಥಿತರಿದ್ದರು.