ಬೆಳ್ಳಾರೆ: ಹಿದಾಯತುಲ್ ಇಸ್ಲಾಂ ಮದ್ರಸ ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆ ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ನಡೆಸುವ ಮದ್ರಸಾ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮ ಮುಸಾಬಖಾ2021 ಮಿಲಾದ್ ಫೆಸ್ಟ್ ಇಂದು ಝಖರಿಯ್ಯಾ ಜುಮಾ ಮಸ್ಜಿದ್ ವಠಾರದಲ್ಲಿ ಜರುಗಿತು. ಸದರ್ ಮುಅಲ್ಲಿಂ ಬಹು ಮುಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಬಹು ಯೂನುಸ್ ಸಖಾಫಿ ವಯನಾಡ್ ರವರು ಉದ್ಘಾಟಿಸಿ ಮಾತನಾಡಿದರು. ಅಧ್ಯಾಪಕರಾದ ಝೈನುದ್ದೀನ್ ಮುಸ್ಲಿಯಾರ್ ಮಾತನಾಡಿದರು.ವೇದಿಕೆಯಲ್ಲಿ ತೀರ್ಪುಗಾರರಾದ ಬಹು ನಝೀರ್ ಅರ್ಶದಿ, ಬಹು ಝಖರಿಯ್ಯಾ ಮದನಿ ಕಡಬ , ಉಪಸ್ಥಿತರಿದ್ದರು. ನಂತರ ಮದ್ರಸ ವಿದ್ಯಾರ್ಥಿಗಳ ವಿವಿಧ ರೀತಿಯ ಕಲಾ ಸಾಹಿತ್ಯ ಸ್ಪರ್ಧೆ ನಡೆಯಿತು. ಕಾರ್ಯಕ್ರಮಕ್ಕೆ ಅದ್ಯಾಪಕರಾದ ಬಹು.ಸುಲೈಮಾನ್ ಮುಸ್ಲಿಯಾರ್ ಸ್ವಾಗತಿಸಿ ಬಹು ರಫೀಕ್ ಮುಸ್ಲಿಯಾರ್ ವಂದಿಸಿದರು.