ಶೇಣಿಯಲ್ಲಿ ಹಲವು ವರ್ಷಗಳಿಂದ ಬೇಡಿಕೆಯಿದ್ದ ಸಾರ್ವಜನಿಕರ ಬಸ್ ನಿಲ್ದಾಣವನ್ನು ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿ ಮತ್ತು ದಾನಿಗಳ ಸಹಕಾರದಿಂದ ನಿರ್ಮಾಣಗೊಂಡು ನ. 3ರಂದು ಲೋಕಾರ್ಪಣೆಗೊಂಡಿತು.
ನಿವೃತ್ತ ಕನ್ನಡ ಉಪನ್ಯಾಸಕರಾದ ಅನಂತ ಪದ್ಮನಾಭ ಗೋಪಾಲಕಜೆ ತಂಗುದಾಣವನ್ನು ಉದ್ಘಾಟಿಸಿ ಸಮಾಜಮುಖಿ ಕೆಲಸಗಳ ಬಗ್ಗೆ ಶ್ಲಾಘಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿಯ ಅಧ್ಯಕ್ಷ ಮಾಧವ ಗೌಡ ಪಿಂಡಿಬನ ವಹಿಸಿದ್ದರು. ಅತಿಥಿಗಳಾಗಿ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ, ನಿವೃತ್ತ ಶಿಕ್ಷಕ ರಘುನಾಥ ಕಾಯಾರ, ಅಮರಪಡ್ನೂರು ಸ.ಉ.ಹಿ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರಮಾಕಿಶೋರಿ ಕೆ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ.ಜಿ. ಭಾಗವಹಿಸಿ ಶುಭ ಹಾರೈಸಿದರು. ಶ್ರೀಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕ ಶ್ರೀಕೃಷ್ಣ ಸೇವಾ ಸಮಿತಿಯ ಪೂರ್ವಾಧ್ಯಕ್ಷ ವಿಶ್ವನಾಥ ಮೋಟುಕಾನ ಸ್ವಾಗತಿಸಿದರು. ಶೇಣಿ ಬೈದೆರುಗಳ ಗರಡಿಯ ಆಡಳಿತ ಮೊಕ್ತೇಸರರಾದ ಬಿ.ಕೆ.ಧರ್ಮಪಾಲ ಶೇಣಿ ಕಾರ್ಯಕ್ರಮ ನಿರೂಪಿಸಿದರು.