ಯುಗಪುರುಷ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾನುಗ್ರಹದೊಂದಿಗೆ ಆದರಣೀಯ ಡಿ.ಹರ್ಷೇಂದ್ರ ಕುಮಾರ್ ಅವರ ಶುಭಾಶಯಗಳೊಂದಿಗೆ ಯಕ್ಷಯೋಧ ಮಿತ್ರವೃಂದ ಕೋಟೆಮುಂಡುಗಾರು ವತಿಯಿಂದ ಯೋಧನಮನ ಕಾರ್ಯಕ್ರಮ ನ.01ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ಜರುಗಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.
ಸಭಾಕಾರ್ಯಕ್ರಮ ಮುಖ್ಯ ಅತಿಥಿ ಅಭ್ಯಾಗತರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು.
ಮುಖ್ಯ ಅತಿಥಿಗಳಾಗಿ ಆರ್.ಕೆ.ಭಟ್ ಬೆಳ್ಳಾರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ವಿಶ್ವನಾಥ ರೈ ಕಳಂಜ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕರಾದ ಗಿರೀಶ್ ಹೆಗ್ಡೆ ಧರ್ಮಸ್ಥಳ, ಕಳಂಜ ಗ್ರಾ.ಪಂ. ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಕಿಲಂಗೋಡಿ, ಕೋಟೆಮುಂಡುಗಾರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ ತೋಟದಮೂಲೆ, ಕಳಂಜ ಯುವಕ ಮಂಡಲದ ಅಧ್ಯಕ್ಷ ಶಿವರಾಮ ಕಜೆಮೂಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಯೋಧರಿಗೆ ಗೌರವಾರ್ಪಣೆ ಸಲುವಾಗಿ ‘ಯೋಧನಮನ’ ಕಾರ್ಯಕ್ರಮ ನಡೆಯಿತು. ಯೋಧರಾದ ಗೋಪಾಲಕೃಷ್ಣ ಭಟ್ ಕಾಂಚೋಡು, ಲಕ್ಷ್ಮೀನಾರಾಯಣ ರೈ, ರಾಮಚಂದ್ರ ಭಟ್ ಬಾಳಿಲ, ಸುರೇಶ್ ಬಿ ಅಗಲ್ಪಾಡಿ, ಪದ್ಮನಾಭ ಬಾಳಿಲ, ಶ್ರೀಧರ.ಎಸ್ ಹಾಗೂ ಶ್ರೀಮತಿ ಮಹಾದೇವಿ ಪಿ.ಟಿ ಇವರುಗಳನ್ನು ಗೌರವಿಸಲಾಯಿತು. ನಂತರ ಯೋಧರಿಗೆ ಗೌರವಾರ್ಥವಾಗಿ ‘ವಂದೇ ಮಾತರಂ’ ಗೀತೆ ಹಾಡಲಾಯಿತು. ಯಕ್ಷಗಾನ ಭಾಗವತ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಲ ಹಾಗೂ ತಂಡದವರು ಪ್ರಾರ್ಥಿಸಿದರು. ಎನ್.ಆರ್.ದಾಮೋದರ ಶರ್ಮಾ ಬಾರ್ಕೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಂಜೆ ಧರ್ಮಸ್ಥಳ ಮೇಳದ ಕಲಾವಿದರು ಹಾಗೂ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಲೀಲೆ ಹಾಗೂ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ನಡೆಯಿತು.