ಕೋಟಿ ಹೃದಯಗಳ ಪ್ರಾರ್ಥನೆ ಹುಸಿಯಾಯಿತು…
ಕೋಟಿ ಮನಸುಗಳ ಆಸೆಯು ಹುಸಿಯಾಯಿತು, ಇಂದು ಹುಸಿಯಾಯಿತು…
ಪ್ರೀತಿ-ಸ್ನೇಹದ “ಅರಸು” ಮರೆಯಾದನು, ಇಂದು ಮರೆಯಾದನು…
“ದೊಡ್ಮನೆ”ಯ “ಬೆಟ್ಟದ ಹೂವು” ಮರೆಯಾಯಿತು “ಆಕಾಶ”ದಲ್ಲಿ ಮರೆಯಾಯಿತು…
ವಿಧಿಯ ಆಟದ ಎದುರು ಎಲ್ಲಾ ಶೂನ್ಯವಾಯಿತು, ಎಲ್ಲಾ ಮುಗಿದು ಹೋಯಿತು…
ಯಾರ ಊಹೆಗೂ ನಿಲುಕದ ಘಟನೆ ನಡೆದುಹೋಯಿತು, ನಮ್ಮೆದುರು ನಡೆದು ಹೋಯಿತು…
ಮರಳಿ ಬಾರದ ಲೋಕಕೆ ಹೊರಟು ಹೋದನು “ವಂಶಿ”, ಆ “ಪರಮಾತ್ಮ”ನ ಪಾದವ ಸೇರಿಬಿಟ್ಟನು…
“ನಟಸಾರ್ವಭೌಮ”ನ ಬದುಕು ಅಂತ್ಯವಾಯಿತು, ಇಲ್ಲಿಗೆ ಮುಗಿದು ಹೋಯಿತು…
“ಕನ್ನಡದ ಕೋಟ್ಯಾಧಿಪತಿ”ಯ “ಅಭಿ”ಮಾನಿಗಳು ಅಂತಿಮ ದರ್ಶನಕ್ಕಾಗಿ ಹರಿದು ಬಂದರು, ಸಮುದ್ರದಂತೆ ಹರಿದು ಬಂದರು…
ಕನ್ನಡಿಗರ ದುಃಖದ ಕಟ್ಟೆ ಒಡೆದು ಹೋಯಿತು, ಚೂರು ಚೂರಾಯಿತು…
ಆ ವಿಧಿಯು ಎಷ್ಟು ಕ್ರೂರವೆಂದು ಅನಿಸಿಬಿಟ್ಟಿತು, ನಮಗೆ ಅನಿಸಿಬಿಟ್ಟಿತು…
ಕುಣಿದು ಹಾಡುತಿದ್ದ ನಿನ್ನ ದೇಹ ಸ್ತಬ್ಧವಾಯಿತು, ಇಂದು ಸ್ತಬ್ಧವಾಯಿತು…
ಸಾವಿರಾರು ಜನರ ಬದುಕಿಗೆ ಬೆಳಕಾದ ನಿನ್ನ ಬದುಕು ಅಂತ್ಯವಾಯಿತು, ಇಲ್ಲಿಗೆ ಕೊನೆಯಾಯಿತು…
ಬದುಕೆಂಬ ಆಟದಲ್ಲಿ ವಿಧಿಯು ಎಷ್ಟು ಕ್ರೂರವೆಂದು ಅರ್ಥವಾಯಿತು, ನಮಗೆ ತಿಳಿದುಹೋಯಿತು…
ನೀವಿನ್ನು ನೆನಪು ಮಾತ್ರ ಎಂಬ ನಿಜವ ಅರಗಿಸಿಕೊಳ್ಳುವ ಶಕ್ತಿ ಇಲ್ಲದಾಯಿತು, ನಮಗೆ ಇಲ್ಲದಾಯಿತು…
“ವೀರ ಕನ್ನಡಿಗ”ರ ಪ್ರೀತಿಯ “ಅಪ್ಪು” ಮರೆಯಾದನು, “ಪೃಥ್ವಿ”ಯಿಂದ ಮರೆಯಾದನು…
ಕೋಟಿ ಹೃದಯಗಳ ಪ್ರಾರ್ಥನೆ ಹುಸಿಯಾಯಿತು, ಇಂದು ಹುಸಿಯಾಯಿತು…
ಕೋಟಿ ಮನಸುಗಳ ಆಸೆಯು ಹುಸಿಯಾಯಿತು, ಇಂದು ಹುಸಿಯಾಯಿತು…
ವಿಧಿಯ “ಚಕ್ರವ್ಯೂಹ”ದಲ್ಲಿ ಎಲ್ಲಾ ಶೂನ್ಯವಾಯಿತು, ಎಲ್ಲಾ ಮುಗಿದು ಹೋಯಿತು…
ಯಾರ ಊಹೆಗೂ ನಿಲುಕದ ಘಟನೆ ನಡೆದುಹೋಯಿತು, ಇಂದು ನಡೆದುಹೋಯಿತು…
ಕನ್ನಡಿಗರ ಪ್ರೀತಿಯ “ರಾಜಕುಮಾರ” ಮರೆಯಾದನು, ಮಿಂಚಿ ಮರೆಯಾದನು…
✍ಉಲ್ಲಾಸ್ ಕಜ್ಜೋಡಿ