ಸುಳ್ಯ ಗಾಂಧಿನಗರ ನಾವೂರು ನಿವಾಸಿ ಧನಂಜಯ ಕೆ. ಟೈಲರ್ ರವರು ನ.1 ರಂದು ಹೃದಯಾಘಾತದಿಂದ ನಿಧನರಾದರು.
ಅವರಿಗೆ 61 ವರ್ಷ ವಯಸ್ಸಾಗಿತ್ತು.
ಅವರು ಗಾಂಧಿನಗರ ಮಸೀದಿ ಬಳಿ ಹಲವಾರು ವರ್ಷಗಳ ಕಾಲ ಕಟ್ಲೆರಿ ಅಂಗಡಿಯನ್ನು ನಡೆಸುತ್ತಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಗಾಂಧಿನಗರದಲ್ಲಿದ್ದ ಉದ್ಯಮವನ್ನು ಸ್ಥಳಾಂತರಿಸಿ ರಥಬೀದಿಯಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು. ಅಮರಸುದ್ದಿ ಪತ್ರಿಕೆಯ ಏಜೆಂಟರಾಗಿದ್ದರು. ಒಂದು ಅವಧಿಗೆ ಸುಳ್ಯ ಮಂಡಲ ಪಂಚಾಯತ್ ಸದಸ್ಯರೂ ಆಗಿದ್ದರು.
ಮೃತರ ಪತ್ನಿ ಸರೋಜಿನಿ, ಪುತ್ರ ಗುರುದೀಕ್ಷಿತ್,ಪುತ್ರಿಯರಾದ ದಿಪ್ತಿ,ಚಾಂದಿನಿ,ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.