Ad Widget

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ನಲ್ಲಿ ಪ್ರಾಚಿ ಆ್ಯಂಟಿಕ್ ಕಲೆಕ್ಷನ್ ಬಿಡುಗಡೆ

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ಪುತ್ತೂರು ಮಳಿಗೆಯಲ್ಲಿ “ಪ್ರಾಚಿ ಆ್ಯಂಟಿಕ್ ಕಲೆಕ್ಷನ್” ಪಾರಂಪರಿಕ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹವನ್ನು ಅ.08 ರಂದು ಬಿಡುಗಡೆ ಮಾಡಲಾಯಿತು. ನೂತನ “ಪ್ರಾಚಿ ಆ್ಯಂಟಿಕ್ ಕಲೆಕ್ಷನ್ ” ವಿಭಾಗವನ್ನು ಪುತ್ತೂರಿನ ಖ್ಯಾತ ವೈದ್ಯ ದಂಪತಿ ಡಾ.ಚಂದ್ರಶೇಖರ ರಾವ್ ಮತ್ತು ಡಾ.ಪೂರ್ಣಾ.ಸಿ. ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಗಳನ್ನು ವೇದಾ ಲಕ್ಷ್ಮೀಕಾಂತ್ ಹಾಗೂ ಮೇಘ ಸುಧನ್ವ ಸ್ವಾಗತಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಡಾ.ಪೂರ್ಣಾ.ಸಿ ರಾವ್ ಮಾತನಾಡುತ್ತಾ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ನವರ ವಿನೂತನ ಪ್ರಯೋಗ “ಪ್ರಾಚಿ ಮತ್ತು “ಗ್ಲೋ” ಬ್ರಾಂಡ್ ಗಳಿಗೆ ಹೆಚ್ಚು ಗ್ರಾಹಕರು ಬರಲಿ. ಮೊದಲಿನಿಂದಲೂ ಜಿ.ಎಲ್ ಮಳಿಗೆಯಲ್ಲಿ ಹೊಸತು ಸಿಗುತ್ತದೆ ಎಂಬ ಭಾವನೆಗೆ ಇನ್ನಷ್ಟು “ಗ್ಲೋ” ನೀಡಿ ಪ್ರಾಚೀನ ಕಲೆಗೆ ಹೊಸ ಅರ್ಥ ಕೊಡುತ್ತಿರುವ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ಗೆ ಶುಭವಾಗಲಿ ಎಂದರು.
ಸಮಾರಂಭದಲ್ಲಿ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ನ ಮುಖ್ಯಸ್ಥರಾದ ಬಲರಾಮ ಆಚಾರ್ಯ ಪಾಲುದಾರರಾದ ಸುದನ್ವ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ನಂದಿತಾ ವಿಜೇಶ್ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!