- Monday
- November 25th, 2024
ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿ ಕಳೆದ 12 ವರ್ಷಗಳಿಂದ ಕಾರ್ಯಚರಿಸುತ್ತಿಸುತ್ತಿರುವ ಶಿವಶಕ್ತಿ ಆಯಿಲ್ ತನ್ನ ಗ್ರಾಹಕರಿಗೆ ಹೆಚ್ಚು ಸೇವೆ ನೀಡುವ ಉದ್ದೇಶದಿಂದ ಶಿವಶಕ್ತಿ ಫ್ಲೋರ್ ಮಿಲ್ ಸೆ.11 ರಂದು ಶುಭಾರಂಭಗೊಂಡಿತು. ಇಲ್ಲಿ ಅಕ್ಕಿ, ಗೋಧಿ, ರಾಗಿ ಹಾಗೂ ಧವಸಧಾನ್ಯಗಳನ್ನು ಕ್ಲಪ್ತ ಸಮಯದಲ್ಲಿ ಹುಡಿಮಾಡಿಕೊಡಲಾಗುವುದು ಎಂದು ಮಾಲಕರಾದ ಶಿವರಾಮ ಬಳ್ಳಡ್ಕ ತಿಳಿಸಿದ್ದಾರೆ.
ಶಾಂತಿನಗರ ಸ.ಉ.ಹಿ.ಪ್ರಾ. ಶಾಲೆಯಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಸೆ.3 ರಂದು ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ನಝೀರ್ , ಉಪಾಧ್ಯಕ್ಷರಾಗಿ ಶ್ರೀಮತಿ ಗೋಪಿ, ಸದಸ್ಯರಾಗಿ ಜಗದೀಶ್ ಪಿ ಆರ್, ಬಾಲಕೃಷ್ಣ ಎಸ್.ಆರ್, ಶಶಿಕಲಾ.ಎ, ಗೀತಾ, ಲತಾ.ಎ, ಪುಟ್ಟಣ್ಣ ನಾಯ್ಕ, ಇಬ್ರಾಹಿಂ.ಎಸ್.ಎ, ಹಮೀದ್, ಸಾಜಿದ, ಮುಮ್ತಾಜ್, ಜುಲೈಕಾ, ಮರಿಯಮ್ಮ, ಸೀತಾ, ಚಿಕ್ಕಯ್ಯ, ಪುಷ್ಪಲತ, ದಿವ್ಯ.ಎಂ ಇವರುಗಳು ಆಯ್ಕೆಯಾದರು
ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ...
ಕಾಯರ್ತೋಡಿ ಶ್ರೀ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷರಾಗಿ ವಾಸುದೇವ ಬೆಳ್ಳಿಪ್ಪಾಡಿ, ಕಾರ್ಯದರ್ಶಿಯಾಗಿ ಶೇಷಪ್ಪ ನಾಯ್ಕ ಪರಿವಾರಕಾನ, ಕೋಶಾಧಿಕಾರಿಯಾಗಿ ವಸಂತ ಬಿಳಿಯಾರು, ಉಪಾಧ್ಯಕ್ಷರಾಗಿ ವೆಂಕಟ್ರಮಣ ದೇಂಗೋಡಿ, ವೆಂಕಟ್ರಮಣ ಕುದ್ಪಾಜೆ, ಶ್ರೀಮತಿ ಯಶೋಧ ರಾವ್‌ರವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಮೊಕ್ತೇಸರರಾದ ಡಿ.ಎಸ್.ಗಿರೀಶ್, ಡಿ.ಎಸ್.ಕುಶಾಲಪ್ಪ...
ನ.ಪಂ.ಸದಸ್ಯ ಉಮ್ಮರ್ ಅವರು ನಗರದಲ್ಲಿನ ಫುಟ್ಪಾತ್ ನ ತಡೆಬೇಲಿಯನ್ನು ತಮ್ಮ ಪ್ರಭಾವ ಬಳಸಿ ತೆಗೆದಿದ್ದಾರೆ ಹಾಗೂ ಹಲವು ಅನಧಿಕೃತ - ಅಕ್ರಮ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ನಗರ ಮಹಾಶಕ್ತಿಕೇಂದ್ರ ಗಂಭೀರ ಆರೋಪ ಹೊರಿಸಿದೆ. ಅಕ್ರಮವನ್ನು ಸಕ್ರಮ ಮಾಡುವ ಉದ್ಯೋಗವನ್ನೇ ಮಾಡುತ್ತಿರುವ ಉಮ್ಮರ್ ಅವರ ಮೇಲೆ ನ.ಪಂ. ಅವರು ಸೂಕ್ತ ಕ್ರಮ ಕೈಗೊಳ್ಳಬೇಕು...
ಹಿಂದೂ ಐಕ್ಯ ವೇದಿ ದೇಲಂಪಾಡಿ ಘಟಕದ ವತಿಯಿಂದ ಸರಕಾರಿ ಆಯುರ್ವೇದ ಆಸ್ಪತ್ರೆ ವಠಾರದಲ್ಲಿ ಸೆ.12 ರಂದು ಸ್ವಚ್ಛತಾ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.
ಸುಳ್ಯ ಕಸಬಾ ಸುಪ್ರೀತ್ ಮೋಂಟಡ್ಕ ಮತ್ತು ಲತಾಶ್ರೀ ಸುಪ್ರೀತ್ ಮೋಂಟಡ್ಕ ದಂಪತಿಗಳ ಪುತ್ರಿ ಸ್ನಿಗ್ಧ ಮೋಂಟಡ್ಕ ಇವಳ 8ನೇ ವರ್ಷದ ಹುಟ್ಟು ಹಬ್ಬವನ್ನು ಸುಳ್ಯ ಕೇರ್ಪಳ ಸಾನ್ವಿದ್ಯ ನಿಲಯದಲ್ಲಿ ಸೆ.12 ರಂದು ಆಚರಿಸಲಾಯಿತು
ಜೇಸೀ ಸಪ್ತಾಹದ ಪ್ರಯುಕ್ತ ಮ್ಯಾಟ್ರಿಕ್ಸ್ ಎಜುಕೇಷನ್ ಇನ್ಸ್ಟಿಟ್ಯೂಷನ್ ಸುಳ್ಯದಲ್ಲಿ ಮುಕ್ತ ಕೇರಂ ಪಂದ್ಯಾಟದ ಉದ್ಘಾಟನೆ ಸೆ.12ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಸಿಟಿಯ ಉಪಾಧ್ಯಕ್ಷ ಬಶೀರ್ ಯು ಪಿ ಬೆಳ್ಳಾರೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸಹಾಯಕ ಇಂಜಿನಿಯರ್ ಮಣಿಕಂಠರವರು ಪಂದ್ಯಾಟದ ಉದ್ಘಾಟನೆಗೈದರು. ಮುಖ್ಯ ಅತಿಥಿಗಳಾಗಿ ಪ್ರವೀಣ್ ಆಲೆಟ್ಟಿ ಮತ್ತು ಡಿಗ್ಯಾ ನಾಯ್ಕ್, ಘಟಕಾಧ್ಯಕ್ಷ ಚಂದ್ರಶೇಖರ್...
ಮಕ್ಕಳಿಗೆ ರೊಬೋಟಿಕ್ ಲ್ಯಾಬ್ ಮೂಲಕ ತರಬೇತಿ ನೀಡಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞನದ ಬಗ್ಗೆ ಕುತೂಹಲ ಹೆಚ್ಚಿಸಿ ಪ್ರೋತ್ಸಾಹ ನೀಡುವ ಟೆಕ್ ಅನ್ವೇಷಣದ ಟೆಕ್ ಸಂವೇದ ಸುಳ್ಯ ಶಾಖೆ ಶ್ರೀಹರಿ ವಾಣಿಜ್ಯ ಸಂಕೀರ್ಣದಲ್ಲಿರುವ ಜ್ಞಾನದೀಪ ಸಂಸ್ಥೆಯಲ್ಲಿ ಸೆ.9ರಂದು ಉದ್ಘಾಟನೆಗೊಂಡಿದೆ.ಮಾಣಿಬೆಟ್ಟು ಶಿವರಾಮ ಗೌಡರು ಉದ್ಘಾಟಿಸಿದರು. ಟೆಕ್ನೊ ಅನ್ವೇಷಣ ಮಂಡ್ಯದ ಸಂಚಾಲಕರಾದ ಅವಿನಾಶ್ ಎ. , ಟೆಕ್ ಸಂವೇದದ...
ದೆಹಲಿಯ ಸಿವಿಲ್ ಡಿಫೆನ್ಸ್ ಅಧಿಕಾರಿ ಸಾಬಿಯಾ ಸೈಫ್ ಮೇಲೆ ಅಮಾನವೀಯವಾಗಿ ಅತ್ಯಾಚಾರಗೈದು ಮೃಗೀಯವಾಗಿ ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ಗ್ರಾಮ ಸಮಿತಿ ಹಾಗೂ ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ಳಾರೆ ಜಂಟಿ ಆಶ್ರಯದಲ್ಲಿ ಸೆ.11ರಂದು ಬೆಳ್ಳಾರೆ ಬಸ್ಸು ತಂಗುದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಎಸ್.ಡಿ.ಪಿ.ಐ ರಾಜ್ಯ...
Loading posts...
All posts loaded
No more posts