
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ( ಟ್ರಸ್ಟ್ ) ಸುಳ್ಯ ತಾಲೂಕು ಗುತ್ತಿಗಾರು ವಲಯದ ಗುತ್ತಿಗಾರು ಒಕ್ಕೂಟದ ನೇಸರ ಹೆಸರಿನ ಪ್ರಗತಿ ಬಂಧು ಸಂಘದ ಉದ್ಘಾಟನೆ ಸೆ.29 ರಂದು ನಡೆಯಿತು. ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ ವಳಲಂಬೆ ಯವರು ದೀಪ ಬೆಳಗಿ ಸಂಘವನ್ನು ಉದ್ಘಾಟಿಸಿ ಈ ಸಂಘವು ನಿಮ್ಮ ಆರ್ಥಿಕ ಚಟುವಟಿಕೆ ಕುಟುಂಬದ ಅಭಿವೃದ್ಧಿ ಹಾಗೂ ಉಳಿತಾಯ ಮಾಡುವಂತಹ ಮನೋಭಾವವನ್ನು ಬೆಳೆಸಿ ಉತ್ತಮ ಸಂಘ ಎಂದು ಗುರುತಿಸಿಕೊಳ್ಳಲಿ ಎಂದು ಶುಭ ಹಾರೈಸಿ ದಾಖಲೆಯನ್ನು ಹಸ್ತಾಂತರಿಸಿದರು.
ಸೇವಾ ಪ್ರತಿನಿಧಿ ಲೋಕೇಶ್ವರ ಡಿ ಆರ್ ರವರು ಸಂಘದ ಜವಾಬ್ದಾರಿ ನಿಯಮಪಾಲನೆ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.
ಸಂಘದ ಅಧ್ಯಕ್ಷರಾಗಿ ಲೋಕೇಶ್ ಕಾರ್ಯದರ್ಶಿ ದಯಾನಂದ ಕೋಶಾಧಿಕಾರಿ ಪ್ರದೀಪ್ ಮತ್ತು ಸದಸ್ಯರಾಗಿ ದಿನೇಶ್, ಭರತ್, ಧರ್ಮಪಾಲ ಇವರನ್ನು ಆಯ್ಕೆ ಮಾಡಲಾಯಿತು.