ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇಲ್ಲಿ ಮಕ್ಕಳ ಮಾನಸಿಕ ಹಾಗೂ ದೈಹಿಕ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ಸೆ.29ರಂದು ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದಲ್ಲಿ ಮಾಹಿತಿಯನ್ನು ಸ್ಥಳೀಯ ವೈದ್ಯರಾದ ಕುಮಾರಿ ಪ್ರಿಯಾಂಕ ನಾಟಿಕೇರಿ ಅವರು ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಮಹಮದ್ ಇಸಾಕ್ ಅವರು ಮತ್ತು ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀಯುತ ಚಾರ್ಲ್ಸ್ ಅವರು ಜ್ವಲಂತ ಉದಾಹರಣೆಗಳ ಮೂಲಕ ಆರೋಗ್ಯ ಹಾಗೂ ಸುರಕ್ಷತೆಯ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸಿದರೆ, ಗಣಿತ ಅಧ್ಯಾಪಕರಾದ ಶ್ರೀಯುತ ನಾರಾಯಣ ಬಿ. ಅವರು ಸ್ವಚ್ಛತೆ, ಹಾಗೂ ನೈರ್ಮಲ್ಯದ ಬಗ್ಗೆ ತಿಳಿಸಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢ ಶಾಲಾ ಹಿರಿಯ ಅಧ್ಯಾಪಕರಾದ ಶ್ರೀಯುತ ಸೂಫಿ ಪೆರಾಜೆ ಅವರು ವಹಿಸಿದ್ದರು. ಸಹಶಿಕ್ಷಕರಾದ ಶ್ರೀಮತಿ ಪ್ರೇಮಾ ನಿರೂಪಿಸಿದರು.
- Thursday
- November 21st, 2024