ಐವರ್ನಾಡು ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇವುಗಳ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ, ದತ್ತಿ ನಿಧಿ ಹಾಗೂ ಪಠ್ಯ ಪೂರಕ ಅಭ್ಯಾಸ ಪುಸ್ತಕ ವಿತರಣೆ, 9ನೇ ತರಗತಿ ವಿದ್ಯಾರ್ಥಿನಿಗೆ ವೈದ್ಯಕೀಯ ಶ್ರವಣ ಸಾಧನ ಖರೀದಿಗೆ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್ .ಎನ್. ಮನ್ಮಥ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಅಧ್ಯಕ್ಷ ಪದ್ಮನಾಭ ಬೀಡು, ಕಾರ್ಯದರ್ಶಿ ನವೀನ್ ಕುಮಾರ್ ಭಾರದ್ವಾಜ್,
ಕೋಶಾಧಿಕಾರಿ ಎ. ಕೆ. ಮಣಿಯಾಣಿ, ಇನ್ನರ್ ವೀಲ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಮಮತಾ ಸತೀಶ್ ಮಡ್ತಿಲ ಮತ್ತು ರೋಟರಿ ಸದಸ್ಯರು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತಾ ಪವಿತ್ರಮಜಲು, ಗ್ರಾಮ ಪಂಚಾಯತ್ ಸದಸ್ಯರೂ, ಪೋಷಕರೂ ಆದ ಮಮತಾ ಉದ್ದoಪಾಡಿ, ಕಾಲೇಜಿನ ಪ್ರಾಂಶುಪಾಲ ಇಸಾಕ್ ಅಹಮ್ಮದ್ ಹಾಗೂ ಪ್ರೌಢ ಶಾಲಾ ಹಿರಿಯ ಶಿಕ್ಷಕ ಸೂಫಿ ಪೆರಾಜೆ, ಶಾಲಾ ಎಸ್ ಡಿ ಎಂ ಸಿ ಯ ಕಾರ್ಯಾಧ್ಯಕ್ಷರಾದ ಶ್ರೀಮತಿ ಸ್ವರಾಜ್ಯಲಕ್ಷ್ಮಿ , ಶಾಲಾ ದತ್ತಿ ನಿಧಿ ಸ್ಥಾಪಕರ ಹಾಗೂ ಊರ ದಾನಿಗಳ ಪರವಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ಉಮೇಶ್ ಮಾಸ್ಟರ್ ಪಲ್ಲತ್ತಡ್ಕ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾಂತಾರಾಮ ಕಣಿಲೆಗುಂಡಿ ಉಪಸ್ಥಿತರಿದ್ದರು.