Ad Widget

ಕಾಮಧೇನು ಮಾಧವ ಗೌಡ, ಮಂಜುನಾಥ ಮೇಸ್ತ್ರಿಯವರಿಗೆ ಬೆಂಗಳೂರಿನಲ್ಲಿ ಸಮಾಜ ರತ್ನ ರಾಜ್ಯ ಪುರಸ್ಕಾರ

ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೊಡುವ ವಾರ್ಷಿಕ ಪ್ರಶಸ್ತಿಗೆ ಸುಳ್ಯದ ಇಬ್ಬರು ಆಯ್ಕೆಯಾಗಿದ್ದು, ಸೆ.26 ರಂದು ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

. . . . . . . . .


ಬೆಳ್ಳಾರೆಯ ಉದ್ಯಮಿ ಕಾಮಧೇನು ಗ್ರೂಪ್ಸ್ ಮಾಲಕ ಎಂ.ಮಾಧವ ಗೌಡ ಕಾಮಧೇನು,
ಸಮಾಜ ಸೇವಕ ಮಂಜುನಾಥ ಮೇಸ್ತ್ರಿ ಬಳ್ಳಾರಿಯವರಿಗೆ ಸಮಾಜರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

. . . . . . .

ಈ ಸಂದರ್ಭದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವೇದಮೂರ್ತಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕರ್ನಾಟಕ ಸಹಕಾರ ಮಹಾಮಂಡಲ ಮಾಜಿ ಅಧ್ಯಕ್ಷ ಡಾ.ಶೇಖರ ಗೌಡ ಪಾಟೀಲ್, ಆರ್.ಎನ್.ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಸುಧೀರ್ ಪೈ, ಸಹಕಾರ ಮಹಾಮಂಡಲದ ಸಿ.ಇ.ಒ.ಗುರುಪ್ರಸಾದ್,ಟ್ರಸ್ಟ್ ನ ನಿರ್ದೇಶಕ ಸೋಮಶೇಖರ್, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading