Ad Widget

ಅ.07 – ಅ.14: ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವಗಳು

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18 ಪೇಟೆ ದೇವಸ್ಥಾನಗಳಿಗೊಳಪಟ್ಟ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ‘ಶ್ರೀ ನವರಾತ್ರಿ ಮಹೋತ್ಸವಗಳು’ ಅ.07ನೇ ಗುರುವಾರದಿಂದ ಪ್ರಾರಂಭಗೊಂಡು ಅ.14ನೇ ಗುರುವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಅ.07ರಂದು ಬೆಳಿಗ್ಗೆ 8.00ಗಂಟೆಗೆ ದೀಪೋಜ್ವಲನದೊಂದಿಗೆ ಮಹೋತ್ಸವ ಮೊದಲ್ಗೊಳ್ಳಲಿದೆ. ಪ್ರತಿನಿತ್ಯ ಮಧ್ಯಾಹ್ನ ಗಂಟೆ 12.00ರಿಂದ ಉಭಯ ದೇವರಿಗೆ ಮಹಾಪೂಜೆ, ಗಂಟೆ 1.00ಕ್ಕೆ ಭೂರಿಭೋಜನ ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ ಉಭಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ದೇವರ ಹಾಗೂ ಶ್ರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ವಿನಂತಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!