ಕಟ್ಟ ಗೋವಿಂದನಗರ ಅಂಗನವಾಡಿ ಕೇಂದ್ರದಲ್ಲಿ ಸೆ.20 ರಂದು ಪೋಷಣ್ ಮಾಸಾಚರಣೆ ಪ್ರಯುಕ್ತ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ದುರ್ಗಾಲಕ್ಷ್ಮಿ ನಿಶಾಂತ್ ಕಟ್ಟ ಅವರು ಸಮತೋಲನ ಆಹಾರ ಹಾಗೂ ದೈಹಿಕ, ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕಾಂಶಗಳನ್ನು ಯಾವ ರೀತಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಚಂದ್ರಾವತಿ ಅವರು ಮಕ್ಕಳಿಗೆ ನೀಡುವ ಚುಚ್ಚುಮದ್ದು, ಜಂತುಹುಳು ನಿವಾರಣಾ ಮಾತ್ರೆ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ಮೋಹಿನಿ ಕಟ್ಟ ಹಾಗೂ ಆಶಾ ಕಾರ್ಯಕರ್ತೆಯಾದ ಶ್ರೀಮತಿ ಶೇಷಮ್ಮ ಉಪಸ್ಥಿತರಿದ್ದರು.
ಪುಷ್ಪಾವತಿ ಕೆ.ಹೆಚ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಮಕ್ಕಳ ತಾಯಂದಿರು ಸ್ಥಳಿಯವಾಗಿ ಸಿಗುವ ಸೊಪ್ಪು-ತರಕಾರಿಗಳಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಪ್ರಾತ್ಯಕ್ಷಿಕೆಗೆ ಇಟ್ಟರು. ಆಂಗನವಾಡಿ ಸಹಾಯಕಿ ಸಹಕರಿಸಿದರು.
(ವರದಿ :- ಉಲ್ಲಾಸ್ ಕಜ್ಜೋಡಿ)